ಸುಮಲತಾ ಅಂಬರೀಶ್ ಚುನಾವಣಾ ಏಜೆಂಟ್ ಮದನ್ ವಿಚಾರಣೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿಯಲಾಗಿದೆ.
ಮಂಡ್ಯ : ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಮಲತಾ ಅಂಬರೀಶ್ ಅವರ ಚುನಾವಣೆ ಏಜೆಂಟ್ ಮದನ್ ಅವರ ವಿಚಾರಣೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕಚೇರಿಗೆ ಬೀಗ ಹಾಕಲಾಗಿದೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಚೇರಿ ಸಿಬ್ಬಂದಿ ಹಾಗೂ ಕೆಲ ವ್ಯಕ್ತಿಗಳಿಗಷ್ಟೇ ಒಳಕ್ಕೆ ಪ್ರವೇಶ ನೀಡಿದ್ದು, ಮಾಧ್ಯಮಗಳಿಗೂ ನಿರ್ಬಂಧ ಹೇರಲಾಗಿದೆ. ಗೇಟ್ ಗೆ ಬೀಗ ಜಡಿದು ವಿಚಾರಣೆ ನಡೆಸುತ್ತಿದ್ದು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಜೊತೆ ಮಾತುಕತೆ ನಡೆಯುತ್ತಿದೆ.
ನಿಖಿಲ್ ನಾಮಪತ್ರದ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮದನ್ ಪ್ರಾದೇಶಿಕ ಆಯುಕ್ತರಿಗೆ ವಿವರಣೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿಗೆ ಬೀಗ ಹಾಕಲಾಗಿದೆ.
ಈ ಹಿಂದೆ ನಿಖಿಲ್ ನಾಮಪತ್ರದಲ್ಲಿ ಗೊಂದಲವಿರುವ ಬಗ್ಗೆ ಚರ್ಚೆಯಾಗಿದ್ದು, ಬಳಿಕ ಈ ಪರಿಶೀಲಿಸಿದ್ದು, ನಾಮಪತ್ರ ಸಿಂಧುವಾಗಿತ್ತು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
