ಬೆಳಗಾವಿ :  ಜಾರಕಿಹೊಳಿ ಸಹೋದರರ ಸವಾಲ್ ಇಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಹಾಲಿ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್ ಕೊಡಬೇಕು ಎಂದು ಲಾಬಿ ನಡೆಸಿದ್ದರೆ, ಬಂಡಾಯ ಕಾಂಗ್ರೆಸ್‌ನ ನೇತೃತ್ವದ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರು ವಿವೇಕರಾವ್ ಪಾಟೀಲ್ ಪರ ಲಾಬಿ ನಡೆಸಿದ್ದಾರೆ.

ರಾಜ್ಯ ಸಮರ: ಹೊಸಮುಖ ಕಣಕ್ಕಿಳಿಸಿ ಗೆಲ್ಲಲು ಬಿಜೆಪಿ ಸಿದ್ಧತೆ!

ಈ ಇಬ್ಬರ ಪೈಕಿ ಯಾರಿಗೆ ಟಿಕೆಟ್ ತಪ್ಪಿಸಿದರೂ ಮತ್ತೊಬ್ಬರು ಬಂಡಾಯವೇಳುವ ಚಿಂತೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.

ಮಂಡ್ಯದ ಅಳಿಯ ಆಗ್ತಾರಾ ನಿಖಿಲ್ ಕುಮಾರಸ್ವಾಮಿ?

 ಹೀಗಾಗಿ ನ್ಯೂಟ್ರಲ್ ಅಭ್ಯರ್ಥಿಗಳ ಹುಡುಕಾಟದಲ್ಲಿ ಮಾಜಿ ಶಾಸಕ ಅಶೋಕ್ ಪಟ್ಟಣ್ ಹಾಗೂ ಮಾಜಿ ಸಚಿವ ಎಸ್.ಬಿ. ಸಿದ್ನಾಳ್ ಅವರ ಪುತ್ರ ಶಶಿಕಾಂತ್ ಸಿದ್ನಾಳ್ ಅವರನ್ನು ಹೆಸರನ್ನು ಪರಿಶೀಲಿಸಲಾಗುತ್ತಿದೆ. ಮೂಲಗಳ ಪ್ರಕಾರ ಶಶಿಕಾಂತ ಸಿದ್ನಾಳ್ ಹೆಸರು ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ.