ಹಾಸನ[ಮಾ .14 ]  ದೇವೇಗೌಡರೇ ಹಾಸನದಿಂದ ಸ್ಪರ್ಧೆ ಮಾಡಬೇಕು ಎಂಬುದು ಈಗಲೂ ನನ್ನ ಒತ್ತಾಯ. ಆದರೆ ದೇವೇಗೌಡರು ಮೊಮ್ಮಗನಿಗೆ ಅನುಕೂಲ ಮಾಡಿಕೊಡಲು ಕಣ್ಣೀರ ನಾಟಕ ಆಡುತ್ತಿದ್ದಾರೆ. ಅಧಿಕಾರ ಅನುಭವಿಸಲು ಕಾಂಗ್ರೆಸ್ ಬೇಕು, ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಬೇಕು. ಆದ್ರೆ ಕಳೆದ 9 ತಿಂಗಳಿಂದ ಜಿಲ್ಲೆಯಲ್ಲಿ ಕೈ ಪಕ್ಷವನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎ. ಮಂಜು ಆರೋಪಿಸಿದ್ದಾರೆ.

ಮೋದಿ ಬೆಂಬಲಿಗರ ಅಣಕವಾಡಲು ಹೋಗಿ ಎಡವಟ್ಟು ಮಾಡಿಕೊಂಡ ರಮ್ಯಾ!

ಮೈಸೂರಿನಲ್ಲಿ ಸಿದ್ರಾಮಣ್ಣನನ್ನು‌ ಷಡ್ಯಂತ್ರ ಮಾಡಿ ಸೋಲಿಸಿದ್ರು. ಅಂಥವರಿಗೆ ಇಲ್ಲಿ ಬೆಂಬಲ ನೀಡಬೇಕಾ ಎಂದು ಬೆಂಬಲಿಗರ ಸಭೆಯಲ್ಲಿ ಕಿಡಿಕಾರಿದರು. 

ಇದು ಮೊದಲ ಸಭೆ, ಇದೇ ರೀತಿಯ ಸಭೆಯನ್ನು ಬೇರೆ ಬೇರೆ ಕಡೆ ಮಾಡುವೆ. ಕಾರ್ಯಕರ್ತರು, ಮತದಾರರ ಅಭಿಪ್ರಾಯ ಪಡೆದು ಮುಂದಿನ‌ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ಕುಟುಂಬದ ವಿರುದ್ಧ ಹೋರಾಡಲು ನಾವೆಲ್ಲಾ ಒಂದಾಗೋಣ ಎಂದು ಮಂಜು ಹೇಳಿದರು. ಆದರೆ ಎ. ಮಂಜು ಸಭೆ ಮುಗಿಸುತ್ತಿದ್ದಂತೆಯೇ ಮೋದಿ‌ ಪರ ಘೋಷಣೆ ಮೊಳಗಿತು.