Asianet Suvarna News

ಸನ್ನಿ ಹೆಸರು ಬಳಸಿದ್ದ ಅರ್ನಾಬ್ ಬೆನ್ನು ಬಿದ್ದ ಕಾಂಡೋಮ್ ಕಂಪನಿ!

ಲೋಕ ಸಮರದ ಫಲಿತಾಂಶ ವಿಶ್ಲೇಷಣೆ ಸಂದರ್ಭ  ಖ್ಯಾತ ಟಿವಿ ಆ್ಯಂಕರ್ ಅರ್ನಬ್ ಗೋಸ್ವಾಮಿ ಮಾತಿನ ಭರಾಟೆಯಲ್ಲಿ ಮಾಜಿ ನೀಲಿತಾರೆ ಸನ್ನಿ ಲಿಯೋನ್ ನೆನಪಿಸಿಕೊಂಡಿದ್ದ್ದಾದರು! ಚುನಾವಣೆಗೆ ಸ್ಪರ್ಧೆ ಮಾಡಿರುವ ಸನ್ನಿ ಡಿಯೋಲ್ ಬದಲಾಗಿ ಸನ್ನಿ ಲಿಯೋನ್ ಎಂದಿದ್ದು ಟ್ರೋಲಿಗರಿಗೂ ಒಳ್ಳೆ ಆಹಾರ ಸಿಕ್ಕಂತೆ ಆಗಿತ್ತು.

Loksabha Electins 2019 Condom brand takes a jibe at Arnab for addressing Sunny Deol Sunny Leone
Author
Bengaluru, First Published May 24, 2019, 4:27 PM IST
  • Facebook
  • Twitter
  • Whatsapp

ನವದೆಹಲಿ(ಮೇ. 24)  ಸನ್ನಿ ಲಿಯೋನ್ ಹೆಸರು ಬಳಸಿದ್ದಕ್ಕೆ ಅರ್ನಾಭ್ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಬೇಕಾಗಿದೆ. ಈ ಬಾರಿ ಕಾಂಡೋಮ್ ಕಂಪನಿಯೊಂದು ಅರ್ನಾಬ್  ಬೆನ್ನು ಬಿದ್ದಿದೆ.

ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್’ನ ಗುರುದಾಸ್’ಪುರದಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ದಿಸಿವಿಜಯ ಸಾಧಿಸಿದ್ದಾರೆ. ಸನ್ನಿ ಡಿಯೋಲ್ ಮತ ಗಳಿಕೆಯಲ್ಲಿ ಮುಂದೆ ಇದ್ದಾರೆ ಎಂಬುದನ್ನು ಹೇಳುವ ವೇಳೆ ಅರ್ನಾಬ್  ಸನ್ನಿ ಲಿಯೋನ್ ಹೆಸರು ಬಳಸಿದ್ದರು.

ಮಾತಿನ ಭರದಲ್ಲಿ ’ಸನ್ನಿ’ ನೆನಪಿಸಿಕೊಂಡ ಅರ್ನಬ್..! ಟ್ವಿಟರಿಗರಿಂದ ಫುಲ್ ಟ್ರೋಲ್

ಡಿಯರ್ ಅರ್ನಾಬ್, ನಮಗೆ ಗೊತ್ತಾಗುತ್ತದೆ, ಅವಳು ಎಲ್ಲರ  ಮೈಂಡ್ ನಲ್ಲಿ ಯಾವಾಗಲೂ ಇದ್ದಾಳೆ.. ಎಂದು ಟ್ವೀಟ್ ಮಾಡಿದೆ.

 


 

Follow Us:
Download App:
  • android
  • ios