ನವದೆಹಲಿ[ಮೇ.23]: 17ನೇ ಲೋಕಸಭಾ ಚುನಾವಣೆಯ ಮತದಾನದ ಎಣಿಕೆ ಭರದಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಒಕ್ಕೂಟ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. 

ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್’ನ ಗುರುದಾಸ್’ಪುರದಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ದಿಸಿದ್ದಾರೆ. ಬಾರ್ಡರ್ ಸಿನಿಮಾ ಖ್ಯಾತಿಯ ಸನ್ನಿ ಡಿಯೋಲ್ ಆರಂಭಿಕ ಮತಗಳಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಕರ್ ಎದುರು ಆರಂಭಿಕ ಮುನ್ನಡೆ ಗಳಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡುವ ಭರದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಹಾಗೂ ಖ್ಯಾತ ಆ್ಯಂಕರ್ ಅರ್ನಬ್ ಗೋಸ್ವಾಮಿ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನು ಗಮನಿಸಿದ ಕೆಲ ಟ್ವಿಟರಿಗರು ಟ್ರೋಲ್ ಮಾಡಲಾರಂಬಿಸಿದ್ದಾರೆ. ಆ ಬಳಿಕ ಟ್ವಿಟರ್’ನಲ್ಲಿ ಮಾಜಿ ನೀಲಿತಾರೆ ಸನ್ನಿ ಲಿಯೋನ್ ಕೂಡಾ ಟ್ವಿಟರ್’ನಲ್ಲಿ ಟ್ರೆಂಡ್ ಆಗಿದ್ದಾರೆ. ಇದಾದ ಕೆಲಹೊತ್ತಿನಲ್ಲೇ ಸನ್ನಿ ಲಿಯೋನ್ ಕೂಡಾ ಟ್ವೀಟ್ ಮಾಡಿದ್ದು, ಎಷ್ಟು ಮತಗಳಿಂದ ನಾನು ಮುಂದಿದ್ದೇನೆ ಎಂದು ಪ್ರಶ್ನಿಸಿದ್ದಾರೆ. 

ಅರ್ನಬ್ ಹಾಗೂ ಸನ್ನಿ ಲಿಯೋನ್ ಬಗ್ಗೆ ಟ್ವಿಟರಿಗರು ಏನಂದ್ರು ನೀವೇ ನೋಡಿ...