ನವದೆಹಲಿ, [ಏ.08]: 17ನೇ ಲೋಕಸಭೆ ಚುನಾವಣಾ ಸಮರ ಹತ್ತಿರವಾಗುತ್ತಿದ್ದಂತೆ, ಸಮೀಕ್ಷಾ ವರದಿಗಳು ಕುತೂಹಲ ಕೆರಳಿಸುತ್ತಿದ್ದು, ಇಂದು [ಸೋಮವಾರ] ಟೈಮ್ಸ್ ನೌ ಸಮೀಕ್ಷೆ ಹೊರಬಿದ್ದಿದೆ.

ಟೈಮ್ಸ್‌ ನೌ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಮತ್ತೆ NDAಗೆ ಬಹುಮತ ಸಾಧ್ಯತೆ.  ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ NDA ಮೈತ್ರಿಕೂಟಕ್ಕೆ 279 ಸ್ಥಾನ , ಯುಪಿಎ 149, ಇತರೆ 115 ಸ್ಥಾನ ಗಳಿಸುವ ಸಾಧ್ಯತೆ ಎನ್ನುತ್ತಿದೆ ಸಮೀಕ್ಷೆ.

ಸುವರ್ಣನ್ಯೂಸ್-ಕನ್ನಡಪ್ರಭ ಮಹಾ ಸಮೀಕ್ಷೆ: ಸರ್ಜಿಕಲ್ ಸ್ಟ್ರೈಕ್ ಶ್ರೇಯ ಯಾರಿಗೆ?

ಈ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕಳೆದ ಚುನಾವಣೆಯ ಫಲಿತಾಂಶದಲ್ಲಿ ಕೊಂಚ ಏರಿಳಿತವಾಗಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕಿಂತ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲಿದೆ. ಆದ್ರೆ ಕಳೆದ ಬಾರಿಗಿಂತ ಬಿಜೆಪಿ 1 ಸ್ಥಾನ ಕುಸಿಯಲಿದೆ ಎನ್ನುವುದು ಟೈಮ್ಸ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಮತ್ತೊಂದು ಸಮೀಕ್ಷೆ: ಕೂದಲೆಳೆ ಅಂತರದಲ್ಲಿ ಈ ಪಕ್ಷಕ್ಕೆ ಬಹುಮತ!

ಮಾರ್ಚ್ 22 ರಿಂದ ಏಪ್ರಿಲ್ 4ರ ತನಕ 960 ಪ್ರದೇಶಗಳಲ್ಲಿ 14,301 ಜನರಿಂದ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗಿದೆ. ಹಾಗಾದ್ರೆ ರಾಜ್ಯದ 28 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ ಎನ್ನುವುದನ್ನು ಮುಂದೆ ನೋಡಿ.

28 ಕ್ಷೇತ್ರಗಳ ಪೈಕಿ ಯಾರಿಗೆ ಎಷ್ಟು ಸ್ಥಾನ..?


ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 16 ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ 12 ಸ್ಥಾನಗಳಲ್ಲಿ ಜಯಗಳಿಸಲಿದೆ. ಇನ್ನು ಇತರೆ ಯಾವುದೇ ಪಕ್ಷದ ಅಭ್ಯರ್ಥಿಗಳು ಜಯಗಳಿಸುವುದಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿದೆ. 

2014ರ ಲೋಕಸಭಾ ಫಲಿತಾಂಶ


2014ರ ಲೋಕಸಭಾ ಫಲಿತಾಂಶವನ್ನು ನೋಡುವುದಾದ್ರೆ ಈ ಬಾರಿ ಬಿಜೆಪಿಗೆ 1 ಸ್ಥಾನ ಕಡಿಮೆ ಬರಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 1 ಸ್ಥಾನ ಹೆಚ್ಚಿಗೆಗಳಿಸಲಿದೆ.  ಕಳೆದ ಬಾರಿ [2014] ಬಿಜೆಪಿಗೆ 17 ಸ್ಥಾನಗಳು ಸಿಕ್ಕಿದ್ದರೆ, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯಗಳಿಸಿತ್ತು. [ಕಳೆದ ಎಲೆಕ್ಷನ್ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದಿಲ್ಲ]

ಟೈಮ್ಸ್ ನೌ ವೋಟ್ ಶೇರಿಂಗ್ ಯಾರಿಗೆ ಎಷ್ಟು..?


ಇಂದು [ಸೋಮವಾರ] ಬಹಿರಂಗವಾದ ಟೈಮ್ಸ್ ನೌ ಸಮೀಕ್ಷೆ ಪ್ರಕಾರ ವೋಟ್ ಶೇರಿಂಗ್ ವಿವರವನ್ನು ನೋಡಿದರೆ, ಬಿಜೆಪಿ 45.1ರಷ್ಟು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 43.4ರಷ್ಟು ಮತಗಳನ್ನು ಪಡೆಯಲಿವೆ. 2014ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸೇರಿ 51.8ರಷ್ಟು, ಬಿಜೆಪಿ 43ರಷ್ಟು ಮತಗಳನ್ನು ಪಡೆದಿದ್ದರು.