ನವದೆಹಲಿ[ಏ.08]: ಲೋಕಸಭೆ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಸಮೀಕ್ಷೆಗಳ ಭರಾಟೆ ಮುಂದುವರಿದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 275 ಸ್ಥಾನಗಳನ್ನು ಪಡೆದು ಕೂದಲೆಳೆ ಅಂತರದಲ್ಲಿ ಬಹುಮತ ಸಂಪಾದಿಸಲಿದೆ ಎಂದು ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಸಮೀಕ್ಷೆ ಹೇಳಿದೆ.

ಕಳೆದ ಬಾರಿ 282 ಸ್ಥಾನ ಪಡೆದಿದ್ದ ಬಿಜೆಪಿ ಬಲ 230ಕ್ಕೆ ಕುಸಿಯಲಿದೆ. ಆದರೆ ಮಿತ್ರಪಕ್ಷಗಳ ಸಹಾಯದಿಂದ ಎನ್‌ಡಿಎ ಬಹುಮತ ಗಳಿಸಲಿದೆ. ಕಾಂಗ್ರೆಸ್‌ ಬಲ 44ರಿಂದ 97ಕ್ಕೆ ಏರಲಿದ್ದು ಕಾಂಗ್ರೆಸ್‌ ನೇತೃತ್ವದ ಯುಪಿಎ 147 ಸ್ಥಾನ ಗೆಲ್ಲಲಿದೆ. ಇತರರು 121 ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ ಎಂದು ಮಾಚ್‌ರ್‍ 24ರಿಂದ 31ರವರೆಗೆ ನಡೆಸಲಾದ ಸಮೀಕ್ಷೆ ವಿವರಿಸಿದೆ.

65,160 ಮಂದಿಯನ್ನು ಮಾತನಾಡಿಸಿ ಈ ಸಮೀಕ್ಷೆ ಸಿದ್ಧಪಡಿಸಲಾಗಿದೆ ಎಂದು ಇಂಡಿಯಾ ಟೀವಿ ಹೇಳಿದೆ.

ಒಟ್ಟು 543 (ಬಹುಮತ 272)

ಎನ್‌ಡಿಎ 282

ಯುಪಿಎ 147

ಇತರರು 121