ಹುಬ್ಬಳ್ಳಿ :  ಕುಂದಗೋಳ ಉಪಚುನಾವಣೆಯಲ್ಲಿ ಹಂಚಲು ಅಕ್ರಮ‌ ಹಣ ಸಾರಾಯಿ ತಂದಿಟ್ಟಿದ್ದಾರೆ ಎಂಬ ಬಿಜೆಪಿ ಮುಖಂಡ ಬಸವರಾಜ್ ಬೊಮ್ಮಾಯಿ ಆರೋಪ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಚುನಾವಣೆ ಆಯೋಗದ ಫೋನ್ ನಂಬರ್ ಕೊಡುತ್ತೇನೆ ಕೇಂದ್ರ ಸರ್ಕಾರ ಎಲ್ಲಾ ಶಕ್ತಿ ಉಪಯೋಗಿಸಿಕೊಂಡು ಸೀಜ್ ಮಾಡಿಸಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಹುಬ್ಬಳ್ಳಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಬಂಡಾಯದ ಬಗ್ಗೆ ಯಾವುದೇ ರೀತಿಯಾದ ಪ್ರತಿಕ್ರಿಯೆ ನೀಡಿಲ್ಲ. ಸಭೆಯಲ್ಲಿ ಆಸಕ್ತಿ ಇರುವ ಶಾಸಕರು ಪಾಲ್ಗೊಳ್ಳುತ್ತಾರೆ. ಇಲ್ಲದೇ ಇರುವವರು ಬರುವುದಿಲ್ಲ ಎಂದರು. 

ನನ್ನತ್ತ ಕೆಸರು ಎರಚಿದಷ್ಟೂ ಕಮಲ ಅರಳುತ್ತೆ: ನರೇಂದ್ರ ಮೋದಿ

ಕಳಸಾ ಬಂಡೂರಿ ವಿಚಾರವಾಗಿ ಈ ವೇಳೆ ಪ್ರಸ್ತಾಪಿಸಿದ ಅವರು ನಮ್ಮ ಬಳಿ ಹಣ ಇದೆ ಎಲ್ಲವೂ ಇದೆ. ಆದರೆ ನೋಟಿಫಿಕೇಶನ್ ಕೇಂದ್ರ ಸರ್ಕಾರ ಮಾಡಬೇಕು. ನೋಟಿಫಿಕೇಶ್ ಬಂದ ದಿನವೇ ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಆದರೆ ಕಳಸಾಬಂಡೂರಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.