ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಮಂಡ್ಯದ ಬಾಡಿಗೆ ಮನೆಗೆ ಇಂದು ಪ್ರವೇಶಿಸಲಿದ್ದಾರೆ.
ಮಂಡ್ಯ : ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಾಡಿಗೆ ಪಡೆದಿರುವ ಮನೆಯ ಗೃಹಪ್ರವೇಶ ಸೋಮವಾರ [ಮಾ.25] ಸರಳವಾಗಿ ನಡೆಯಲಿದೆ.
Add Asianetnews Kannada as a Preferred Source

ಸುಮಲತಾ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥೇಶ್ವರನಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಇರುವುದರಿಂದ, ಅವರ ಅನುಪಸ್ಥಿತಿಯಲ್ಲಿ ಅಂಬಿ ಬೆಂಬಲಿಗ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಸರಳವಾಗಿ ಪೂಜಾ ವಿಧಾನ ಪೂರೈಸಿ ಗೃಹ ಪ್ರವೇಶ ಮಾಡಲಾಗುವುದು ಆಪ್ತ ಮೂಲಗಳು ಹೇಳಿವೆ.
ಚಾಮುಂಡೇಶ್ವರಿ ನಗರದ 3ನೇ ಕ್ರಾಸ್‌ನಲ್ಲಿರುವ ಈ ಮನೆಯನ್ನು ಹಿಂದೆ 2013ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಅಂಬರೀಶ್ ಬಾಡಿಗೆ ಪಡೆದಿದ್ದರು. ಅಂಬಿ ಭಾರೀ ಅಂತರದಿಂದ ಗೆದ್ದು ಶಾಸಕರಾಗಿ, ಮಂತ್ರಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಇದು ಅಂಬರೀಶ್ ಪಾಲಿಗೆ ಅದೃಷ್ಟದ ಮನೆಯಾಗಿತ್ತು. ಅದೇ ಮನೆಯನ್ನು ಈಗ ಸುಮಲತಾ ಬಾಡಿಗೆ ಪಡೆದಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
