ನವದೆಹಲಿ (ಏ. 16):  ಶಿಲಾಯುಗದಿಂದಲೂ ಅಸ್ತಿತ್ವದಲ್ಲಿರುವ ಅಂಡಮಾನ್‌ ನಿಕೋಬಾರ್‌ ದ್ವೀಪದ ಬುಡಕಟ್ಟು ಜನಾಂಗವೊಂದು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವನ್ನೂ ಚಲಾಯಿಸಿಲ್ಲ.

ನನಗೆ ಮತ ಹಾಕಿದ ಗ್ರಾಮಕ್ಕೆ ಮಾತ್ರ ಅಭಿವೃದ್ಧಿ: ಮನೇಕಾ!

ಅಂಡಮಾನ್‌ ನಿಕೋಬಾರ್‌ ಲೋಕಸಭಾ ಕ್ಷೇತ್ರದಲ್ಲಿರುವ 31 ದ್ವೀಪಗಳಲ್ಲಿ ಏ.11ರಂದು ಮತದಾನ ನಿಗದಿಯಾಗಿತ್ತು. ದಕ್ಷಿಣ ಭಾರತದ ತುತ್ತಿತುದಿಯ ಮತಗಟ್ಟೆಎನಿಸಿಸಿರುವ ಗ್ರೇಟ್‌ ನಿಕೋಬಾರ್‌ ದ್ವೀಪದ ಶೋಂಪೆನ್‌ ಜೋಪಡಿಗೆ ಚುನಾವಣಾ ಅಧಿಕಾರಿಗಳು ತೆರಳಿ ಮತಗಟ್ಟೆಯನ್ನು ಸ್ಥಾಪಿಸಿದ್ದರು. ಆದರೆ, ಬೆಳಗ್ಗೆಯಿಂದ ಸಂಜೆಯವರೆಗೆ ಕಾದರೂ ಒಬ್ಬನೇ ಒಬ್ಬ ಬುಡಕಟ್ಟು ವ್ಯಕ್ತಿ ಮತಚಲಾಯಿಸಲು ಬಂದಿಲ್ಲ.

ಶೋಂಪೆನ್‌ನಲ್ಲಿ ಇರುವ ಎರಡು ಬುಡಕಟ್ಟು ತಾಂಡಾಗಳಲ್ಲಿ ಒಂದರಲ್ಲಿ 66 ಮತ್ತು ಇನ್ನೊಂದರಲ್ಲಿ 22 ಮತದಾರರು ಇದ್ದು, ಅವರಿಗಾಗಿ 2 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಆದರೆ, ದಟ್ಟಾರಣ್ಯದಿಂದ ಆದಿವಾಸಿ ಜನರು ವಾರಕ್ಕೆ ಒಂದು ಬಾರಿ ಇಲ್ಲವೇ 15 ದಿನಕ್ಕೊಮ್ಮೆ ಪಡಿತರ ಪಡೆಯಲು ಹೊರಗೆ ಬರುತ್ತಾರೆ. ಉಳಿದ ಸಮಯದಲ್ಲಿ ಅವರು ತಮ್ಮ ತಾಂಡಾಗಳಿಂದ ಹೊರಗೆ ಬರುವುದಿಲ್ಲ.

ಬಿಜೆಪಿ ಶಾಸಕನ ಬಳಿ 20000 ಕೋಟಿ ಪತ್ತೆ?

ಏ.11ರಂದು ಚುನಾವಣೆ ಇರುವ ಬಗ್ಗೆ ಸ್ಥಳೀಯ ಭಾಷೆಯಲ್ಲೇ ಅವರೊಂದಿಗೆ ಸಂವಹನ ನಡೆಸಬೇಕಾಗಿತ್ತು. ಆದರೆ, ಸ್ಥಳೀಯರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಡಕಟ್ಟು ಜನರು ಮತಚಲಾಯಿಸಲು ಮುಂದಾಗಲಿಲ್ಲ ಎಂದು ಅಂಡಮಾನ್‌ ನಿಕೋಬಾರ್‌ ಲೋಕಸಭಾ ಕ್ಷೇತ್ರದ ಚುನಾಣಾ ಅಧಿಕಾರಿ ಕೆ.ಆರ್‌. ಮೀನಾ ಹೇಳಿದ್ದಾರೆ.

ಶೋಂಪೆನ್‌ ಬುಡಕಟ್ಟು ಜನಾಂಗದ ಇಬ್ಬರು 2014ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ನಾಗರಿಕತೆಯಿಂದ ದೂರವೇ ಉಳಿದಿರುವ ಸೆಂಟಿನೆಲಿಸ್‌ ಮತ್ತ ಜರವಾಗಳು ಇದುವರೆಗೆ ಒಮ್ಮೆಯೂ ಮತದಾನ ಮಾಡಿದ ಇತಿಹಾಸವೇ ಇಲ್ಲ.