Asianet Suvarna News Asianet Suvarna News

ವೈರಲ್ ಚೆಕ್: ಬಿಜೆಪಿ ಶಾಸಕನ ಬಳಿ 20000 ಕೋಟಿ ಪತ್ತೆ?

ಬಿಜೆಪಿ ಶಾಸಕರ ಕಾರಲ್ಲಿ ಶೇಖರಿಸಿಡಲಾಗಿದ್ದ 20 ಸಾವಿರ ಕೋಟಿ ರು. ಅನ್ನು ಜಪ್ತಿ ಮಾಡಲಾಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದು ನಿಜಾನಾ? ಈ ಸುದ್ದಿಯ ಸತ್ಯಾ ಸತ್ಯತೆ ಏನು? ಇಲ್ಲಿದೆ ವಿವರ 

Viral check Truth behind viral photo of BJP MLA carrying Rs 20000 crore cash in his car
Author
Bangalore, First Published Apr 16, 2019, 8:25 AM IST

ಮುಂಬೈ[ಏ.16]: 2019ರ ಲೋಕಸಭಾ ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚದಂತೆ ಹಾಗೂ ಇದಕ್ಕಾಗಿ ಕಪ್ಪು ಹಣ ಬಳಕೆ ಮಾಡದಂತೆ ತಡೆಯಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಕಾರವಾಗಿ ಮಹಾರಾಷ್ಟ್ರದ ಬಿಜೆಪಿ ಶಾಸಕ ಸುಧೀರ್‌ ಗಡ್ಗಿಲ್‌ ಅವರ ಕಾರಲ್ಲಿ ಶೇಖರಿಸಿಡಲಾಗಿದ್ದ 20 ಸಾವಿರ ಕೋಟಿ ರು. ಅನ್ನು ಜಪ್ತಿ ಮಾಡಲಾಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಈ ಸುದ್ದಿ ಹಾಗೂ ಅಧಿಕಾರಿಗಳು ಕಾರಲ್ಲಿದ್ದ ಹಣ ಜಪ್ತಿ ಮಾಡಿದ ಫೋಟೋಗಳನ್ನು ‘ಕಾಂಗ್ರೆಸ್‌ ಸಮರ್ಥಕ್‌’ ಸೇರಿದಂತೆ ಫೇಸ್‌ಬುಕ್‌ ಪೇಜ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ಸುದ್ದಿಯನ್ನು ಪ್ರಸಾರ ಮಾಡಲು ಯಾವುದೇ ಮಾಧ್ಯಮಗಳಿಗೆ ಧೈರ್ಯವಿಲ್ಲ. ಹಾಗಾಗಿ, ಇದನ್ನು ಹೆಚ್ಚು ಶೇರ್‌ ಮಾಡಿ ಎಂದು ಉಲ್ಲೇಖಿಸಲಾಗಿದೆ.

ಆದರೆ, ಈ ಬಗ್ಗೆ ಇಂಡಿಯಾ ಟುಡೇ ವಾಹಿನಿ ಪರಿಶೀಲನೆ ಇಳಿದಾಗ, ಈ ಫೋಟೋ 2016ರಲ್ಲಿ ನಡೆದ ಘಟನೆ ಎಂಬುದು ದೃಢವಾಗಿದೆ. 2016ರಲ್ಲಿ ಮಹಾರಾಷ್ಟ್ರದ ಒಸ್ಮನಾಬಾದ್‌ ಜಿಲ್ಲೆಯ ಚುನಾವಣಾಧಿಕಾರಿಗಳು 6 ಲಕ್ಷ ರು. ಅನ್ನು ವಶಕ್ಕೆ ಪಡೆದಿದ್ದ ಚಿತ್ರ ಇದಾಗಿದೆ ಎಂಬುದು ತಿಳಿದುಬಂದಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

 

Follow Us:
Download App:
  • android
  • ios