ಮೈಸೂರು :  ಲೋಕಸಭಾ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ದಿನ ಸಮೀಪಿಸುತ್ತಿದ್ದರೂ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ವಿಚಾರದ ಚರ್ಚೆ ಇನ್ನೂ ಮುಂದುವರಿದಿದೆ. 

ಬಿಜೆಪಿಗೆ ಜೆಡಿಎಸ್ ನವರು ಮತ ಹಾಕಿದ್ದಾರೆ ಎನ್ನುವ ಸಿದ್ದರಾಮಯ್ಯ, ಸಚಿವ ಜಿ.ಟಿ.ದೇವೇಗೌಡರ ಹೇಳಿಕೆಯನ್ನು ಸಚಿವ ಸಾ.ರಾ. ಮಹೇಶ್ ಸಮರ್ಥಿಸಿಕೊಂಡಿದ್ದಾರೆ.  

ಅವರಿಬ್ಬರೂ ಒಂದೇ ಕ್ಷೇತ್ರದ ನಾಯಕರಾಗಿದ್ದಾರೆ. ಅವರು ಹೇಳಿದಂತೆ ಮೈಸೂರಿನಲ್ಲಿ ಒಂದಷ್ಟು ವ್ಯತ್ಯಾಸ ಆಗಿರಬಹುದು. ಅದನ್ನು ಹೊರತುಪಡಿಸಿದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮೈತ್ರಿ ಯಶಸ್ವಿಯಾಗಿದೆ ಎಂದರು. 

ಮಂಡ್ಯದಲ್ಲಿ ಸುಮಲತಾಗೆ 80 ಸಾವಿರ ಅಂತರದಲ್ಲಿ ಗೆಲುವು : ಸಮೀಕ್ಷೆ

ಇನ್ನು ಈ ವಿಚಾರದಲ್ಲಿ ಸಿದ್ದರಾಮಯ್ಯ, ಜಿ.ಟಿ. ದೇವೇಗೌಡ ತಮ್ಮ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎನ್ನುವ ವಿಚಾರದ ಸಂಬಂಧ ಪ್ರತಿಕ್ರಿಯಿಸಿ, ಈ ರೀತಿಯಾಗಿ ಅವರು ಎಲ್ಲೂ ಕೂಡ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಈ ಮಾತು ನಂಬಲು ಸಾಧ್ಯವಿಲ್ಲ ಎಂದರು.