Asianet Suvarna News Asianet Suvarna News

ಲೋಕಸಭಾ ಚುನಾವಣೆ: ಇಲ್ಲಿದೆ ಬಿಜೆಪಿ 28 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿದೆ ಸಂಭಾವ್ಯರ ಪಟ್ಟಿ. 

Lok Sabha Elections 2019 Karnataka BJP Probable Candidate List
Author
Bengaluru, First Published Mar 20, 2019, 7:52 AM IST

ಬೆಂಗಳೂರು :  ಲೋಕಸಭಾ ಚುನಾವಣೆಯ ರಾಜ್ಯ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಬಹುತೇಕ ಬುಧವಾರ ಪ್ರಕಟಗೊಳ್ಳಲಿದ್ದು, ಹಾಲಿ ಸಂಸದರ ಪೈಕಿ ಶೋಭಾ ಕರಂದ್ಲಾಜೆ ಮತ್ತು ಅನಂತಕುಮಾರ್‌ ಹೆಗಡೆ ಅವರಿಗೆ ಟಿಕೆಟ್‌ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ಬಗ್ಗೆ ರಾಜ್ಯ ಬಿಜೆಪಿಯ ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಬಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಉಭಯ ಸಂಸದರ ಪರವಾಗಿ ಬ್ಯಾಟಿಂಗ್‌ ಮಾಡಿದ್ದರಿಂದ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನಕ್ಕೆ ಬಿಡಲಾಗಿದೆ.

1 ಬೀದರ್: ಭಗವಂತ ಖೂಬಾ
2 ಕಲಬುರ್ಗಿ: ಡಾ.ಉಮೇಶ್ ಜಾಧವ್
3 ರಾಯಚೂರು: ಅಮರೇಶ್ ನಾಯಕ್/ತಿಪ್ಪರಾಜು ಹವಾಲ್ದಾರ್
4 ಬಳ್ಳಾರಿ: ದೇವೇಂದ್ರಪ್ಪ/ ವೆಂಕಟೇಶ್ ಪ್ರಸಾದ್
5 ಕೊಪ್ಪಳ: ಸಂಗಣ್ಣ ಕರಡಿ
6 ವಿಜಯಪುರ: ರಮೇಶ್ ಜಿಗಜಿಣಗಿ
7 ಬಾಗಲಕೋಟೆ: ಪಿ.ಸಿ.ಗದ್ದಿಗೌಡರ್
8 ಚಿಕ್ಕೋಡಿ: ರಮೇಶ್ ಕತ್ತಿ/ಅಣ್ಣಾ ಸಾಹೇಬ್ ಜೊಲ್ಲೆ
9 ಬೆಳಗಾವಿ: ಸುರೇಶ್ ಅಂಗಡಿ
10 ಧಾರವಾಡ: ಪ್ರಹ್ಲಾದ್ ಜೋಶಿ
11 ಉತ್ತರ ಕನ್ನಡ: ಅನಂತಕುಮಾರ್ ಹೆಗಡೆ/ ಡಾ.ಜಿ.ಜಿ.ಹೆಗಡೆ
12 ಹಾವೇರಿ: ಶಿವಕುಮಾರ್ ಉದಾಸಿ
13 ದಾವಣಗೆರೆ: ಜಿ.ಎಂ.ಸಿದ್ದೇಶ್ವರ್
14 ಚಿತ್ರದುರ್ಗ: ಎ.ನಾರಾಯಣಸ್ವಾಮಿ/ ಲಕ್ಷ್ಮೀನಾರಾಯಣ
15 ಶಿವಮೊಗ್ಗ: ಬಿ.ವೈ.ರಾಘವೇಂದ್ರ
16 ದಕ್ಷಿಣ ಕನ್ನಡ: ನಳಿನ್‌ಕುಮಾರ್ ಕಟೀಲು
17 ಉಡುಪಿ ಚಿಕ್ಕಮಗಳೂರು: ಕರಂದ್ಲಾಜೆ/ ಜಯಪ್ರಕಾಶ್ ಹೆಗ್ಡೆ
18 ತುಮಕೂರು: ಜಿ.ಎಸ್.ಬಸವರಾಜು/ ಸುರೇಶ್‌ಗೌಡ
19 ಹಾಸನ: ಎ.ಮಂಜು
20 ಮೈಸೂರು: ಪ್ರತಾಪ್ ಸಿಂಹ
21 ಚಾಮರಾಜನಗರ: ವಿ.ಶ್ರೀನಿವಾಸ್ ಪ್ರಸಾದ್
22 ಮಂಡ್ಯ: (ಸುಮಲತಾಗೆ ಬೆಂಬಲ ಸಂಭವ)
23 ಬೆಂಗಳೂರು ಗ್ರಾಮಾಂತರ: ಸಿ.ಪಿ.ಯೋಗೇಶ್ವರ್/ ಸಿ.ವೈ.ನಿಶಾ
24 ಬೆಂಗಳೂರು ದಕ್ಷಿಣ: ತೇಜಸ್ವಿನಿ ಅನಂತಕುಮಾರ್
25 ಬೆಂಗಳೂರು ಉತ್ತರ: ಡಿ.ವಿ.ಸದಾನಂದಗೌಡ
26 ಬೆಂಗಳೂರು ಕೇಂದ್ರ: ಪಿ.ಸಿ.ಮೋಹನ್
27 ಚಿಕ್ಕಬಳ್ಳಾಪುರ: ಬಿ.ಎನ್.ಬಚ್ಚೇಗೌಡ
28 ಕೋಲಾರ: ಛಲವಾದಿ ನಾರಾಯಣಸ್ವಾಮಿ/ಡಿ.ಎಸ್.ವೀರಯ್ಯ

 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

Follow Us:
Download App:
  • android
  • ios