Asianet Suvarna News Asianet Suvarna News

‘ಗೌಡರನ್ನೇ ಕೈ ಬಿಟ್ಟ ಕುಟುಂಬ : ನಾಮಪತ್ರ ಸಲ್ಲಿಕೆ ವೇಳೆ ಯಾಕೆ ಯಾರು ಹೋಗಿಲ್ಲ’

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ನಡುವೆ ಪರಸ್ಪರ ವಾಕ್ಸಮರ ಜೋರಾಗಿದ್ದು, ಎ.ಮಂಜು ಇದೀಗ ಗೌಡರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ. 

Lok Sabha Elections 2019 Hassan BJP Candidate A Manju Slams HD Deve Gowda Family
Author
Bengaluru, First Published Mar 29, 2019, 1:04 PM IST

ಹಾಸನ : ದೇವೇಗೌಡರು ನಾಮಪತ್ರ ಸಲ್ಲಿಕೆ ವೇಳೆ ಕುಟುಂಬ ಸದಸ್ಯರು ಯಾರೂ ತೆರಳದೇ ನಡು ನೀರಲ್ಲಿ ಕೈ ಬಿಟ್ಟಿದ್ದರು. ಅವರ ಸ್ವಾರ್ಥ ಇದರಿಂದಲೇ ತಿಳಿಯುತ್ತದೆ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ದೇವೇಗೌಡರು ನಾಮಪತ್ರ ಸಲ್ಲಿಸುವ ವೇಳೆ ಅಪ್ಪ, ಮಕ್ಕಳು, ಮೊಮ್ಮಕ್ಕಳು ಯಾರು ಹೋಗಲಿಲ್ಲ.  ಕುಟುಂಬ ಸದಸ್ಯರಿಲ್ಲದೇ ಗೌಡರು ನಾಮಪತ್ರ ಸಲ್ಲಿಕೆಗೆ ತೆರಳಿದ್ದರು ಎಂದು ಗೌಡರ ಪರವಾಗಿ ಮಾತನಾಡಿದ್ದಾರೆ. 

ಇನ್ನು ಜೆಡಿಎಸ್ ನಲ್ಲಿ ಸೂಟ್ ಕೇಸ್ ರಾಜಕಾರಣ ನಡೆಯುತ್ತದೆ ಎಂದು ಹೇಳಿದ ಮಂಜು ಈ ಹಿಂದೆ ಸ್ವತಃ ಪ್ರಜ್ವಲ್ ರೇವಣ್ಣ ಅವರೇ ಇನದನ್ನು ಒಪ್ಪಿಕೊಂಡಿದ್ದರು ಎಂದರು.  

ಎಚ್.ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಎ. ಮಂಜು  ಈ ಹಿಂದೆ ಸುಮಲತಾ ಬಗ್ಗೆ ಅನಾಗರಿಕವಾಗಿ ಮಾತನಾಡಿದ್ದರು. ೭ನೇ ಕ್ಲಾಸ್ ಓದಿರುವ ರೇವಣ್ಣ ಬಗ್ಗೆ ನಾನು ಮಾತನಾಡಲು ಇಷ್ಟ ಪಡುವುದಿಲ್ಲ ಎಂದರು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios