ಶಿವಮೊಗ್ಗ [ಏ. 14]  ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟಿಲ್, ದಾರಿಯಲ್ಲಿ ಹೋಗುವ ಕುಡುಕರ ರೀತಿಯಲ್ಲಿ ಬಡಿದಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.  

ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟಿಲ್ ರೀತಿ ಕುಡುಕರು ಬಡಿದಾಡುವುದಿಲ್ಲ. ಜಾತಿ ವಿಚಾರ ಇವರಿಬ್ಬರ ಸ್ವತ್ತಾ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಒಂದು ಕಡೆ ಶಿವಕುಮಾರ್ ಕ್ಷಮೆ ಕೇಳುತ್ತೆನೆ ಎಂದು ಹೇಳುತ್ತಾರೆ.  ಮತ್ತೊಂದು ಕಡೆ, ಕ್ಷಮೆ ಕೇಳೋಕೆ ಇವನ್ಯಾವನು ಎಂದು ಎಂ.ಬಿ. ಪಾಟಿಲ್ ಹೇಳುತ್ತಾರೆ.  ಒಂದೆ ಪಕ್ಷದ ಮುಖಂಡರು ನಾಯಕರು ಬಡಿದಾಡುತ್ತಿರುವುದು ತೀರಾ ಅಪಮಾನ ಎಂದು ಕಿಡಿ ಕಾರಿದ್ದಾರೆ.  

ನಾವು ಸೋತ್ರೆ ಸರ್ಕಾರ ಇರುತ್ತಾ?: ಸಿದ್ದರಾಮಯ್ಯ ಈ ಮಾತಿನ ಮರ್ಮವೇನು..?

ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಹೊಂದಾಣಿಕೆ ಎಂಬುದು, ಕೆಳಮಟ್ಟದಲ್ಲೂ ಇಲ್ಲ.  ಮೇಲ್ಮಟ್ಟದಲ್ಲೂ ಇಲ್ಲ.  ಶಿವಮೊಗ್ಗ ಸೇರಿದಂತೆ, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಎಲ್ಲೂ ಆಗಿಯೇ ಇಲ್ಲ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.