Asianet Suvarna News Asianet Suvarna News

ನಾವು ಸೋತ್ರೆ ಸರ್ಕಾರ ಇರುತ್ತಾ?: ಸಿದ್ದರಾಮಯ್ಯ ಈ ಮಾತಿನ ಮರ್ಮವೇನು..?

ನಾವು ಸೋತರೆ ಸರ್ಕಾರ ಇರುತ್ತಾ..? - ನಾನು ಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ಆಗಿರೋದು ಕುಮಾರಸ್ವಾಮಿ| ದಳಪತಿಗಳು ಮುಂದೆಯೇ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ.?| ಸಿದ್ದರಾಮಯ್ಯ ಮಾತಿನ ಹಿಂದಿನ ಮರ್ಮವಾದ್ರೂ ಏನು...? ಇಲ್ಲಿದೆ ಸಿದ್ದು ಮಾತಿನ ಒಟ್ಟಾರೆ ತಾತ್ಪರ್ಯ.

Govt Will collapse if We lose siddaramaiah indirectly Caution To JDS
Author
Bengaluru, First Published Apr 14, 2019, 5:57 PM IST

ಮೈಸೂರು, [ಏ.14]: ಮಂಡ್ಯ ಹಾಗೂ ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಪ್ರತಿಷ್ಠೆಯಾಗಿದೆ. ಆದ್ರೆ ಈ ಎರಡೂ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲದಿರುವುದು ಉಭಯ ನಾಯಕರಿಗೆ ತಲೆನೋವಾಗಿದೆ. 

ಮಂಡ್ಯದಲ್ಲಿ ಪುತ್ರ ನಿಖಿಲ್ ಗೆಲ್ಲಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ನಡೆಸಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ಆಪ್ತ ವಿಜಯ್ ಶಂಕರ್ ನನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ. ಆದ್ರೆ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮಧ್ಯೆ ಒಮ್ಮತ ಮೂಡಿಬರುತ್ತಿಲ್ಲ.

ಮೈಸೂರಲ್ಲಿ ’ಕೈ’ ಅಭ್ಯರ್ಥಿ ಸೋತರೆ ನಾನು ಹೊಣೆಯಲ್ಲ; ಸಿದ್ದರಾಮಯ್ಯಗೆ ಜಿಟಿಡಿ ಶಾಕ್!

ನಿಖಿಲ್ ವಿರುದ್ಧ ಚಲುವರಾಯಸ್ವಾಮಿ ಸೇರಿದಂತೆ ಇನ್ನು ಕೆಲ ನಾಯಕರು ಬಂಡಾಯ ಸಾರಿದ್ದರೆ, ಮತ್ತೊಂದೆಡೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದಾರೆ. ಅಷ್ಟೇ ಅಲ್ಲದೇ ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ಅದಕ್ಕೆ ನಾವು ಹೊಣೆ ಅಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಬಹಿರಂಗವಾಗಿಯೇ ಹೇಳಿದ್ದರೆ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್  ಕೈ ಕೊಟ್ರೆ, ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಾವು ಕೈ ಕೊಡ್ತೇವೆ ಎಂದು ಮತ್ತೋರ್ವ ಸಚಿವ ಸಾರಾ ಮಹೇಶ್ ಹೇಳಿದ್ದರು.

‘ಮೈಸೂರು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆ, ನಮಗೆ ಮಂಡ್ಯ ಪ್ರತಿಷ್ಠೆ’!

ಕಾದು ದಳಪತಿಗಳ ಮೇಲೆ ಬಾಣ ಬಿಟ್ಟ ಸಿದ್ದು

Govt Will collapse if We lose siddaramaiah indirectly Caution To JDSಮೈಸೂರು ಮೈತ್ರಿ ಅಭ್ಯರ್ಥಿ ವಿರುದ್ಧ ದಳಪತಿಗಳು ಹೇಳಿಕೆಗಳಲ್ಲವುಗಳನ್ನು ಗಮನಿಸಿದ್ದ ಸಿದ್ದರಾಮಯ್ಯ, ಸಮಯ ಬಂದಾಗ ತಿರುಗೇಟು ನೀಡಬೇಕೆಂದು ಕಾದು ಕುಳಿತ್ತಿದ್ದರು. ಆ ಸಮಯ ಇದೀಗ ಒದಗಿಬಂದಿದ್ದು, ನಾವು ಸೋತರೆ ಸರ್ಕಾರ ಇರುತ್ತಾ? ಎಂದು ಜಿ.ಟಿ.ದೇವೇಗೌಡ ಮುಂದೆಯೇ ಬಹಿರಂಗವಾಗಿ ಹೇಳುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ಸಂದೇಶವನ್ನು ನೀಡಿದರು.

 ಜಿಟಿಡಿ, ಸಾ.ರಾ.ಮಹೇಶ್ ಗೆ ಪರೋಕ್ಷ ವಾರ್ನಿಂಗ್ ..!

Govt Will collapse if We lose siddaramaiah indirectly Caution To JDSಮೈಸೂರಿನ ಜಯಪುರದಲ್ಲಿ ಇಂದು [ಭಾನುವಾರ] ನಡೆದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ,, 'ಮೈತ್ರಿ ಅಭ್ಯರ್ಥಿ ಗೆಲ್ಲಬೇಕು‌. ನಾವು ಸೋತರೆ ಸರ್ಕಾರ ಇರುತ್ತಾ ?. ನಾನು ಮಂತ್ರಿಯಾಗಿಲ್ಲ, ಮುಖ್ಯಮಂತ್ರಿ ಆಗಿರೋದು ಕುಮಾರಸ್ವಾಮಿ. ಮಂತ್ರಿ ಆಗಿರೋದು ಜಿಟಿಡಿ, ಸಾ.ರಾ.ಮಹೇಶ್ ಎಂದು ಹೇಳುವ ಮೂಲಕ ದಳಪತಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.  ಇದು ಚುನಾವಣೆಯಲ್ಲಿ ವರವಾಗುವುದೋ..? ಶಾಪವಾಗುವುದೋ..? ಮೇ 23ರಂದು ಗೊತ್ತಾಗಲಿದೆ.

ಸಿದ್ದು ಮಾತಿನ ತಾತ್ಪರ್ಯವೇನು..?

Govt Will collapse if We lose siddaramaiah indirectly Caution To JDSವಿಜಯ್ ಶಂಕರ್ ಕೊಟ್ಟ ಮಾತಿನಂತೆ ಜಿದ್ದಿಗೆ ಬಿದ್ದು ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡಿರುವ ಸಿದ್ದು, ಮೈಸೂರಿನಲ್ಲಿ ವಿಜಯ್ ಶಂಕರ್ ಅವರನ್ನು ಗೆಲ್ಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ ದಳಪತಿಗಳು ಆಟ ಆಡುತ್ತಿರುವುದರಿಂದ ಸಿದ್ದರಾಮಯ್ಯ ಕಣ್ಣುಕೆಂಪಾಗಿಸಿದ್ದು,  ಮೈತ್ರಿ ಅಭ್ಯರ್ಥಿ ಗೆಲ್ಲಬೇಕು‌. ಸೋತ್ರೆ ಸರ್ಕಾರ ಉಳಿಯುತ್ತಾ ಎನ್ನುವ ಬಾಣವನ್ನು ಜೆಡಿಎಸ್ ಗೆ ಮೇಲೆ ಬಿಟ್ಟಿದ್ದಾರೆ.

ಅಂದ್ರೆ ಮೈಸೂರಿನಲ್ಲಿ ಸಾರಾ ಮಹೇಶ್ ಹಾಗೂ ಜಿ.ಟಿ.ದೇವೇಗೌಡ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಒಳಗೊಳಗೆ ಕತ್ತಿ ಮಸೆಯುವುದು ಬಿಟ್ಟು ನಿಯತ್ತಾಗಿ ಕೆಲಸ ಮಾಡುವುದರ ಜತೆಗೆ ವಿಜಯ್ ಶಂಕರ್ ಅವರನ್ನು ಗೆಲ್ಲಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರ ಈ ಮಾತಿನ ಒಟ್ಟಾರೆ ತಾತ್ಪರ್ಯವಾಗಿದೆ.

Follow Us:
Download App:
  • android
  • ios