ಬೆಂಗಳೂರು[ಮಾ. 25] ಬೆಂಗಳೂರು ಉತ್ತರ ಕ್ಷೇತ್ರದಿಂದ ಅಚ್ಚರಿ ರೀತಿಯಲ್ಲಿ  ಸಚಿವ ಕೃಷ್ಣ ಭೈರೇಗೌಡ ಅವರನ್ನು  ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಕಣಕ್ಕೆ ಇಳಿಸಿದೆ. 

ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ದೇವೇಗೌಡರು ತುಮಕೂರು ಆಯ್ಕೆ ಮಾಡಿಕೊಂಡ ನಂತರ ಜೆಡಿಎಸ್ ತನ್ನ ಬಳಿ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿತು. ಇದೀಗ ಸದಾನಂದ ಗೌಡ ಮತ್ತು ಕೃಷ್ಣ ಭೈರೇಗೌಡ ನಡುವೆ ಹಣಾಹಣಿ ಏರ್ಪಟ್ಟಿದೆ.

ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ ಅಧಿಕೃತ

ಕ್ಷೇತ್ರದ 8 ರಲ್ಲಿ 7 ಕ್ಷೇತ್ರಗಳ್ಲಿ ದೋಸ್ತಿ ಪಕ್ಷದ ಶಾಸಕರಿದ್ದಾರೆ. 5 ಕಾಂಗ್ರೆಸ್ ಮತ್ತು 2 ಜೆಡಿಎಸ್ ಶಾಸಕರಿರುವ ಕಾರಣ ಕಾಂಗ್ರೆಸ್ ರಾಜಕಾರಣದ ದಾಳ ಉರುಳಿಸಿದೆ. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.