ಮಧ್ಯರಾತ್ರಿ ಬೆಳವಣಿಗೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಗೆ ಬೆಂಗಳೂರು ಉತ್ತರ ಬಿಟ್ಟುಕೊಟ್ಟಿತ್ತು. ಇದೀಗ ಅಂತಿಮವಾಗಿ ಗಟ್ಟಿ ಅಭ್ಯರ್ಥಿಯೊಂದನ್ನು ಕಣಕ್ಕೆ ಇಳಿಸಿದ್ದು ಕೃಷ್ಣ ಭೈರೇಗೌಡರನ್ನು ಫೈನಲ್ ಮಾಡಿದೆ. ಹಾಗಾದರೆ ಭೈರೇಗೌಡರ ಆಯ್ಕೆಗೆ ಅಸಲಿ ಕಾರಣ ಏನು?
ಬೆಂಗಳೂರು[ಮಾ. 25] ಬೆಂಗಳೂರು ಉತ್ತರ ಕ್ಷೇತ್ರದಿಂದ ಅಚ್ಚರಿ ರೀತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಕಣಕ್ಕೆ ಇಳಿಸಿದೆ. ಗೌಡರ ಆಯ್ಕೆಗೆ 5 ಕಾರಣಗಳು ಇಲ್ಲಿವೆ.
ಬಿಜೆಪಿಯ ಪ್ರಬಲ ಅಭ್ಯರ್ಥಿ, ಕೇಂದ್ರ ಸಚಿವ ಸದಾನಂದ ಗೌಡರ ಎದುರು ಸಚಿವ ಕೃಷ್ಣ ಭೈರೇಗೌಡರನ್ನು ಹೈಕಮಾಂಡ್ ಅಂತಿಮ ಮಾಡಿದೆ. ಅದು ಹಾಕಿರುವ ಲೆಕ್ಕಾಚಾರ ಇಲ್ಲಿದೆ.
1. ಒಕ್ಕಲಿಗ ಸಮುದಾಯ: ಸದಾನಂದ ಗೌಡರ ಅಂತೆಯೇ ಕೃಷ್ಣ ಭೈರೇಗೌಡರು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಜತೆಗೆ ಕ್ಷೇತ್ರದ ಬ್ಯಾಟರಾಯನಪುರ ಸಹ ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
2. ಶಾಸಕರ ಬಲ: ಕ್ಷೇತ್ರ ವ್ಯಾಪ್ತಿಯ ಮಲ್ಲೇಶ್ವರಂ ಹೊರತುಪಡಿಸಿ 8 ರಲ್ಲಿ 7 ಕ್ಷೇತ್ರಗಳು ದೋಸ್ತಿಗಳ ಕೈನಲ್ಲಿದೆ. 5 ಕ್ಷೇತ್ರದಲ್ಲಿ ಕಾಂಗ್ರೆಸ್ ಎಂಎಲ್ ಎಗಳಿದ್ದರೆ 2 ರಲ್ಲಿ ಜೆಡಿಎಸ್ ಎಂಎಲ್ಎ ಗಳ ಬಲ ಕೃಷ್ಣ ಭೈರೇಗೌಡರಿಗೆ ಸಿಗಲಿದೆ.
ಬೆಂಗಳೂರು ದಕ್ಷಿಣಕ್ಕೆ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ
3. ದೇವೇಗೌಡರು ತೂಮಕೂರಿಗೆ: ಮಾಜಿ ಪ್ರಧಾನಿ ದೇವೇಗೌಡರೆ ಇಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂದರೆ ಯಾವ ಗೊಂದಲಗಳು ಎದುರಾಗುವ ಸಾಧ್ಯತೆ ಇಲ್ಲಿ ಇರಲಿಲ್ಲ. ಆದರೆ ದೇವೇಗೌಡರು ತುಮಕೂರು ಆಯ್ಕೆ ಮಾಡಿಕೊಂಡ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಗಿಂತ ಕಾಂಗ್ರೆಸ್ ಬೆಟರ್ ಎಂಬ ತೀರ್ಮಾನಕ್ಕೆ ದೋಸ್ತಿ ಪಡೆ ಬಂದಿತು.
4. ಸೂಕ್ತ ಅಭ್ಯರ್ಥಿ ಕೊರತೆ: ಕಾಂಗ್ರೆಸ್ ಗೆ ಅಂತಿಮವಾಗಿ ಕ್ಷೇತ್ರ ದಕ್ಕಿದರೂ ಸೂಕ್ತ ಅ್ಬಯರ್ಥಿ ಇರಲಿಲ್ಲ. ಶಾಸಕರು ಸಹ ಒತ್ತಾಯ ಮಾಡಿದ್ದರಿಂದ ಸಚಿವರಾಗಿರುವ ಕೃಷ್ಣ ಭೈರೇಗೌಡರೇ ಅಖಾಡಕ್ಕೆ ಇಳಿಯುವಂತಾಯಿತು.
5. ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡಿದ್ದ ಅನುಭವ: ಹಿಂದೆಒಮ್ಮೆ ಕೃಷ್ಣ ಭೈರೇಗೌಡರು ಬೆಂಗಳೂರು ದಕ್ಷಿಣದಿಂದ ಅನಂತ್ ಕುಮಾರ್ ವಿರುದ್ಧ ಸ್ಪರ್ಧೆ ಮಾಡಿ ಕೆಲವೇ ಸಾವಿರ ಮತಗಳ ಅಂತರದ ಸೋಲು ಕಂಡಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 25, 2019, 6:39 PM IST