‘ಬಿಜೆಪಿಯವರು ಲೋಕಸಭಾ ಟಿಕೆಟ್ ಎಷ್ಟು ಕೋಟಿಗೆ ಸೇಲ್ ಮಾಡಿದ್ದಾರೆ, ಕತ್ತಿಗೆ ಗೊತ್ತಿರುತ್ತೆ’
ಬಿಜೆಪಿಯವರು ಹಣಕ್ಕೋಸ್ಕರ ಲೋಕಸಭಾ ಚುನಾವಣಾ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಬಾಗಲಕೋಟೆ[ಮಾ. 29] ಬಿಜೆಪಿ ಟಿಕೆಟ್ ಸೇಲ್ ಆಗಿವೆ. ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಅನ್ನು ಆರ್ ಎಸ್ ಎಸ್ ನವರು ಸೇಲ್ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ದಿನೇಶ್, ಬಿಜೆಪಿ ಹಣಕೋಸ್ಕರ ಮಾರಾಟವಾಗಿರುವ ಪಕ್ಷ. ಭ್ರಷ್ಟಾಚಾರ ಮೂಲಕ ಬಿಜೆಪಿ ರಾಜಕಾರಣ ಮಾಡುತ್ತಿದೆ. ಎಷ್ಟು ಕೋಟಿಗೆ ಸೇಲ್ ಅನ್ನೋದು ನನಗೆ ಗೊತ್ತಿಲ್ಲ. ಈ ಬಗ್ಗೆ ಕತ್ತಿಯವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ ಎಂದು ಟಾಂಗ್ ನೀಡಿದರು.
‘ದೇವೇಗೌಡರಿಗೆ 14 ಜನ ಮಕ್ಕಳಿಲ್ಲ ಎಂಬ ನೋವಿದೆ’
ಹಣಕ್ಕೋಸ್ಕರ ಬಿಜೆಪಿ ಮುಂಖಡರು ಟಿಕೆಟ್ ಸೇಲ್ ಮಾಡಿದ್ದಾರೆ. ಇಡೀ ದೇಶದಲ್ಲಿ ಭ್ರಷ್ಟಾಚಾರ ಮಾಡ್ತಿದ್ದಾರೆ. ಭ್ರಷ್ಟಾಚಾರಿಗಳೊಂದಿಗೆ ಪ್ರಧಾನಮಂತ್ರಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಒಂದು ಲಕ್ಷ ಕೋಟಿ ಲೂಟಿ ಮಾಡಿ ದೇಶ ಬಿಟ್ಟು ಹೋಗಿದ್ದಾರೆ. ಆಗ ಈ ಚೌಕಿದಾರ ಏನ್ಮಾಡ್ತಿದ್ರು ಎಂದು ದಿನೇಶ್ ಪ್ರಶ್ನೆ ಮಾಡಿದರು.