ಮಂಡ್ಯ :  ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಿಖಿಲ್ ರೋಡ್ ಶೋ ನಡೆಸುತ್ತಿದ್ದ ವೇಳೆ, ಜೆಡಿಎಸ್ ಯುವ ಕಾರ್ಯಕರ್ತರು ‘ಗೋ ಬ್ಯಾಕ್ ದರ್ಶನ್’ ಎಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. 

ಈ ಮೂಲಕ ನಟ ದರ್ಶನ್ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಾಮಾಜಿಕ ತಾಣಗಳಲ್ಲಿ ಆರಂಭ ಗೊಂಡಿರುವ ‘ದರ್ಶನ್, ಯಶ್ ಗೋ ಬ್ಯಾಕ್’ ಅಭಿಯಾನ ಕುರಿತು ಮಾತನಾಡಿದ ನಿಖಿಲ್, ಜಾಲತಾಣಗಳಲ್ಲಿ ಯಾರೋ ನಾಲ್ಕು
ಜನ ಗೋ ಬ್ಯಾಕ್ ಎಂದರೆ ಚಿತ್ರಣ ಬದಲಾಗಲ್ಲ. ಯಾರೂ, ಯಾರಿಗೂ ಗೋ ಬ್ಯಾಕ್ ಎನ್ನುವುದು ಸರಿಯಲ್ಲ ಎಂದರು. 

ಈ ಮೂಲಕ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ