ದೇವೇಗೌಡರು ತುಮಕೂರಿನ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಜಮೀರ್ ಅಹಮದ್ ಅವರಿಗೆ ವಿಶೇಷ ಜವಾಬ್ದಾರಿ ನೀಡಿದ್ದಾರೆ.

ತುಮಕೂರು[ಏ. 07] ತುಮಕೂರು ನಗರದ ಗ್ರಂಥಾಲಯದ ಆವರಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ, ತುಮಕೂರು ಜೆಡಿಎಸ್ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ, ಶಿವಸೇನೆ, ‌ಅಕಾಲಿದಳ ಬಿಟ್ಟರೆ ಎಲ್ಲರೂ ಮಹಾಘಟಬಂಧನ್ ಗೆ ಬಂದಿದ್ದಾರೆ. ಜೆಡಿಎಸ್ ಗೆ ಶಕ್ತಿ ಕಡಿಮೆ ಇರಬಹುದು. ಕಾಂಗ್ರೆಸ್ ಗೆ ಹೆಚ್ಚು ಶಕ್ತಿ ಇರಬಹದು.ಎರಡೂ ಶಕ್ತಿಯನ್ನೂ ಒಟ್ಟು ಗೂಡಿಸಿ ಬಿಜೆಪಿಯನ್ನ ಕುಗ್ಗಿಸಬಹುದು. ಬಿಜೆಪಿಯದ್ದು ಒಂದಂಕಿಯಲ್ಲೆ ಇರಬಹುದು. ಎರಡಂಕಿ ತಲುಪಲು ಕೊಡಬಾರದು ಎಂದು ಹೇಳಿದರು.

 ಸಿದ್ದರಾಮಯ್ಯ ಅಭಿಮಾನಿಗಳನ್ನ ಬಡಿದೆಬ್ಬಿಸಿದ ಶ್ರೀರಾಮುಲು..!

ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡುತ್ತಾ, ಈ ಸಾಧನೆ ಮಾಡಲು ನಿಮ್ಮೆಲ್ಲಾ ಸಹಕಾರ ಬೇಕು. ನಾನು ಹೆಚ್ಚಿಗೆ ಮಾತನಾಡಲ್ಲ. ನನ್ನ ಬದಲಾಗಿ ಜಮೀರ್ ಅಹಮದ್ ಮಾತಾಡ್ತಾರೆ ಎಂದು ಗೌಡರು ಜಮೀರ್‌ಗೆ ಮಾತನಾಡುವಂತೆ ತಾವೇ ಮುಂದಾಗಿ ಕರೆದರು.