ಚುನಾವಣೆ ಬಳಿಕ ಡಿಕೆಶಿಗೆ ಕಾಂಗ್ರೆಸ್ ಹೆಣ ಹೊರುವ ಕೆಲಸ ಕಾಯಂ| ಡಿಕೆ ಶಿವಕುಮಾರ್ ಹೇಳಿಕೆಗೆ ಶೆಟ್ಟರ್ ತಿರುಗೇಟು
ಹೂವಿನಹಡಗಲಿ[ಮಾ.26]: ಕಾಂಗ್ರೆಸ್ ಪಕ್ಷದಲ್ಲಿ ಹೆಣ ಮತ್ತು ಪಲ್ಲಕ್ಕಿ ಹೊರುವವನು ನಾನೇ ಎಂದು ಅಹಂಕಾರದ ಮಾತುಗಳನ್ನಾಡಿರುವ ಸಚಿವ ಡಿ.ಕೆ. ಶಿವಕುಮಾರ್‌ಗೆ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಹೆಣ ಹೊರುವ ಕೆಲಸ ಕಾಯಂ ಆಗಲಿದೆ. ಅದನ್ನಾದರೂ ಜವಾಬ್ದಾರಿಯಿಂದ ನಿಭಾಯಿಸಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿಕೆಶಿಗೆ ಅಧಿಕಾರದ ಅಮಲು ನೆತ್ತಿಗೇರಿದೆ. ಇದು ಬಹಳ ದಿನ ಉಳಿಯುವುದಿಲ್ಲ. ಸಂಡೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಅವರ ಪಕ್ಷದ ಶಾಸಕರೇ ಗೈರಾಗಿದ್ದು, ಬರುವ ದಿನಗಳಲ್ಲಿ ಅವರ ಪಕ್ಷದವರೇ ಅವರಿಗೆ ಪಾಠ ಕಲಿಸುತ್ತಾರೆಂದು ಹೇಳಿದರು.
ನಿನ್ನ ಪಲ್ಲಕ್ಕಿ, ಹೆಣ ಎರಡನ್ನೂ ನಾನೆ ಹೊರ್ತಿನಿ: ಡಿಕೆಶಿ ಹೇಳಿಕೆಗೆ ನಾಗೇಂದ್ರ ಗಡಗಡ!
ಡಿಕೆಶಿಯ ಅಂತ್ಯ ಬಳ್ಳಾರಿಯಿಂದಲೇ ಶುರುವಾಗಲಿದೆ. ಡಿಕೆಶಿ ಕಾಂಗ್ರೆಸ್ ಪಲ್ಲಕ್ಕಿ ಹೊರುವುದಂತೂ ಕನಸಿನ ಮಾತು. ಬರಿ ಕಾಂಗ್ರೆಸ್ ಹೆಣ ಹೊರಬೇಕಾಗುತ್ತದೆ ಎಂದು ಕಾಲೆಳೆದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 26, 2019, 12:45 PM IST