ನವದೆಹಲಿ[ಮಾ. 31]  ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ನಾಗರಿಕರೊಂದಿಗೆ ಅನೇಕ ವಿಚಾರ ಹಂಚಿಕೊಂಡರು. ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ ಮಹಾರಾಜರಲ್ಲ. ಚೌಕಿದಾರ ಮಾತ್ರ ದೇಶಕ್ಕೆ ಸೇವೆ ಮಾಡಬಲ್ಲ ಎಂದು ಪುನರುಚ್ಛಾರ ಮಾಡಿದರು.

ನವದೆಹಲಿಯ ಸಂವಾದದಲ್ಲಿ ಇಡೀ ದೇಶದ ನಾಗರಿಕರೊಂದಿಗೆ ಮಾತನಾಡಿದರು.  ಬಾಲಕೋಟ್ ಮೇಲೆ ವೈಮಾನಿಕ ದಾಳಿಯಿಂದ  ಪಾಕಿಸ್ತಾನಕ್ಕೆ ಬಿಸಿ ಮುಟ್ಟಿದೆ ಎಂದು  ಹೇಳಿದರು.

ಉಗ್ರರ ಕೇಂದ್ರ ಬಿಂದು ಎಲ್ಲಿದೆ ಎನ್ನುವುದು ಇಡಿ ವಿಶ್ವಕ್ಕೆ ಗೊತ್ತಿದೆ. ಈ ಕಾಣರಕ್ಕಾಗಿಯೇ ನಾವು ಅವರ ನೆಲಕ್ಕೆ ನುಗ್ಗಿ ದಾಳಿ ಮಾಡಿ ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ಚುನಾವಣೆ ಇದೆ ಎನ್ನುವ ಕಾರಣಕ್ಕೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ನಮ್ಮ ದೇಶದ ಜನರು ಪಾಕಿಸ್ತಾನ ಹೇಳಿಕೆಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನನಗೆ ಬೇಸರವಾಗುತ್ತದೆ ಎಂದು ಹೇಳಿದರು.

ಇಡೀ ದೇಶದ ನಾಗರಿಕರು ಪ್ರಧಾನಿ ಅವರಿಗೆ ವಿವಿಧ ಪ್ರಶ್ನೆ ಕೇಳಿದರು. ಎಲ್ಲದಕ್ಕೂ ಉತ್ತರ ನೀಡಿದ ಪ್ರಧಾನಿ ಮುಂದೆ ಯಾವ ಗುರಿ ಇಟ್ಟುಕೊಂಡಿದ್ದೇನೆ ಎಂಬುದನ್ನು ವಿವರಿಸಿದರು.

ಆರೋಪಗಳ ಸುರಿಮಳೆ, ಮಂಡ್ಯ ಡಿಸಿ ಮಂಜುಶ್ರೀ ಟ್ರಾನ್ಸ್‌ಫರ್ ಆಗ್ತಾರಾ..?

ಮೋದಿ ಭಾಷಣದ ಹೈಲೈಟ್ಸ್:

* ಸೈನಿಕರು, ಕಾರ್ಮಿಕರು, ವಿದ್ಯಾರ್ಥಿಗಳು ಎಲ್ಲರೂ ಕೂಡ ಚೌಕಿದಾರರೇ. ಚೌಕಿದಾರರು ಯಾವತ್ತೂ ಭ್ರಷ್ಟಾಚಾರವನ್ನ ಸಹಿಸಲ್ಲ.

* 70 ವರ್ಷಗಳ ಅವಧಿಯಲ್ಲಿ ಆಗಿರದ ಅಭಿವೃದ್ಧಿ ಐದು ವರ್ಷದಲ್ಲಿ ಆಗಿದೆ ಅಂದ್ರೆ ಅದಕ್ಕೆ ಕಾರಣ ಮೋದಿ ಅಲ್ಲ. ದೇಶದ ಜನರು. ನೀವು ನಮಗೆ ನೀಡಿರುವ ಪೂರ್ಣ ಬಹುಮತವೇ ಅಭಿವೃದ್ಧಿಗೆ ಪ್ರಮುಖ ಕಾರಣ

* ಬಾಲಕೋಟ್ ಮೇಲೆ ದಾಳಿ ಮಾಡಿದ್ದು, ನಾನಲ್ಲ. ನಮ್ಮ ವೀರ ಯೋಧರು. ಅವರಿಗೆ ಗೌರವ ಸಲ್ಲಿಸೋಣ. ವಂಚಕರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಬಿಡಲು ಸಾಧ್ಯವೇ ಇಲ್ಲ.