Asianet Suvarna News Asianet Suvarna News

ಅಭ್ಯರ್ಥಿಯೇ ಇಲ್ಲದೇ ಕಾಂಗ್ರೆಸ್ ಪ್ರಚಾರ ಶುರು!

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿ ಇಲ್ಲದೆಯೇ ಪ್ರಚಾರ ಆರಂಭಿಸಿದೆ. ಅಷ್ಟಕ್ಕೂ ಆ ಕ್ಷೇತ್ರ ಯಾವುದು? ಇದಕ್ಕೇನು ಕಾರಣ? ಇಲ್ಲಿದೆ ವಿವರ

In Pune Congress Launches Election Campaign Without Candidate
Author
Bangalore, First Published Apr 1, 2019, 9:29 AM IST

ಪುಣೆ[ಏ.01]: ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪರವಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಯಾಚಿಸುತ್ತಾರೆ. ಆದರೆ, ಪುಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದೇ ಲೋಕಸಭಾ ಚುನಾವಣೆಗೆ ಪ್ರಚಾರ ಆರಂಭಿಸಿದೆ.

ಇತ್ತ ಬಿಜೆಪಿ ಸ್ಥಳೀಯ ಶಾಸಕ ಗಿರಿಶ್ ಬಾಪಟ್ ಅವರನ್ನು ಕಣಕ್ಕಿಳಿಸಿ ಪ್ರಚಾರ ಕೈಗೊಂಡಿದ್ದರೆ, ಅಭ್ಯರ್ಥಿಯನ್ನು ಘೋಷಿಸಬಹುದು ಎಂದು ಕಾಯುತ್ತಿದ್ದ ಕಾರ್ಯಕರ್ತರಿಗೆ ನಿರಾಸೆ ಕಾದಿತ್ತು. ಅಭ್ಯರ್ಥಿ ಯಾರು ಎಂದು ಕೇಳಿದರೆ ಹೈಕಮಾಂಡ್‌ನಿಂದ ಉತ್ತರ ಬಂದಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದೇ ಪ್ರಚಾರ ಆರಂಭಿಸಿದೆ.

ಕಾಂಗ್ರೆಸ್ ಈ ಸ್ಥಿತಿಯನ್ನು ಕಂಡು ‘ಮದುವೆ ಗಂಡೇ ಇಲ್ಲದೇ, ಮದುವೆ ದಿಬ್ಬಣಕ್ಕೆ ಕುದುರೆ ಸಿದ್ಧವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios