ಹೈದರಾಬಾದ್ (ಮಾ. 25)  ಈ ಲೋಕಸಭಾ ಕ್ಷೇತ್ರದಲ್ಲಿ ತಂದೆ ಮತ್ತು ಮಗಳ ನಡುವಿನ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಆಂಧ್ರ ಪ್ರದೇಶದ ಅರಾಕು ಲೋಕಸಭೆಯಲ್ಲಿ ತಂದೆ ಮತ್ತು ಮಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.

ಮಗಳು ಶ್ರುತಿ ದೇವಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದರೆ ತಂದೆ ಕಿಶೋರ್ ಚಂದ್ರ ದೇವ್ ತೆಲಗು ದೇಶಂ ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.  ವಿ. ಕಿಶೋರ್  ಚಂದ್ರ ದೇವ್ ತಿಂಗಳ ಹಿಂದಷ್ಟೆ ಕಾಂಗ್ರೆಸ್ ತೊರೆದು ಟಿಡಿಪಿ ಸೇರಿದ್ದರು.  ಆರು ಸಾರಿ ಸಂಸತ್ ಪ್ರವೇಶ ಮಾಡಿದ್ದ ಕಿಶೋರ್ ಅವರಿಗೆ ಈ ಸಾರಿ ಮಗಳೇ ಸವಾಲು ಹಾಕಿದ್ದಾರೆ.

ಮುದ್ದಹನಮೇಗೌಡರ ಖಡಕ್ ರಿಯಾಕ್ಷನ್

ಇದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರವಾಗಿದ್ದು ಒರಿಸ್ಸಾದ ಗಡಿ ಪ್ರದೇಶಗಳನ್ನು ಒಳಗೊಂಡಿದೆ.  ಎಡ ಚಿಂತನೆಗೂ ಈ ಕ್ಷೇತ್ರದಲ್ಲಿ ಬೆಂಬಲ ಇದೆ.  ವಕೀಲೆಯಾಗಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶ್ರುತಿ ತಂದೆ ವಿರುದ್ಧವೇ ಸ್ಪರ್ಧೆ ಮಾಡುತ್ತಿದ್ದಾರೆ.