ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪ್ರಚಾರವೂ ಬಿರುಸಾಗಿದೆ. ಬಿಜೆಪಿ ಸ್ಟಾರ್ ಪ್ರಚಾರಕಿ ತಾರಾ ಅನುರಾಧಾ ಬೆಳಗಾವಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. 

ಬೆಳಗಾವಿ : ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಇದಾದ ಬಳಿಕ ನಿಖಿಲ್ ಎಲ್ಲಿದಿಯಪ್ಪಾ ಡೈಲಾಗ್ ಫುಲ್ ವೈರಲ್ ಆಗಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಈ ರೀತಿಯ ಸಿನಿಮಾ ವಿಚಾರ ಚರ್ಚೆಯಾಗುತ್ತಿದ್ದು, ಬಿಜೆಪಿ ನಾಯಕಿ ತಾರಾ ಅನುರಾಧ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ಸ್ಟಾರ್ ಪ್ರಚಾರಕಿ, ನಟಿ ತಾರಾ ಅನುರಾಧಾ ಈ ಸಿನಿಮಾ ಮಾಡಿದರೆ ಖಂಡಿತವಾಗಿಯೂ ನಟಿಸುವುದಾಗಿ ಹೇಳಿದ್ದಾರೆ. 

ಸಿನಿಮಾ ಕಥೆ ಉತ್ತಮವಾಗಿದ್ದರೆ, ಒಳ್ಳೆಯ ನಿರ್ಮಾಣ ಮಾಡಿದರೆ ನಟಿಸುತ್ತೇವೆ. ಅದರ ಬಗೆಗಿನ ಟ್ರೋಲ್ ಆದ ವಿಡಿಯೋಗಳನ್ನು ನೋಡಿದ್ದೇನೆ. ಯಾರನ್ನೂ ಕೂಡ ತೇಜೋವಧೆ ಮಾಡುವಂತಹ ಸಿನಿಮಾ ಇರಬಾರದು. ಒಳ್ಳೆಯ ಕಥೆ, ಸಂಭಾವನೆ ಇದ್ದರೆ ನಟನೆ ಮಾಡುವುದಾಗಿ ತಾರಾ ಅನುರಾಧಾ ಹೇಳಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.