ಧಾರವಾಡ : ವಿಧಾನಸಭಾ ಚುನಾವಣೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಸಲು ಲಿಂಬೆಹಣ್ಣು ಕೆಲಸ ಮಾಡಿದೆ ಎಂದು ಎಚ್.ಡಿ ರೇವಣ್ಣ ಹೇಳಿದ್ದರು. ಈಗ ಮಂಡ್ಯದಲ್ಲಿ ನಿಖಿಲ್ ಸೋಲಿಸಲು ಆಗಬಹುದುದು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. 

ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ಮಾತನಾಡಿದ ಸಿ.ಟಿ. ರವಿ, ಕೌಟುಂಬಿಕ ಪರಂಪರೆ ಪ್ರಕಾರ ಹಿರಿಯ ಮಗನಿಗೆ  ಕುಟುಂಬದ ಅಧಿಕಾರ ಬರಬೇಕು. ನ್ಯಾಯವಾಗಿ ಮನೆತನದ ಅಧಿಕಾರ ರೇವಣ್ಣಗೆ ಹೋಗಬೇಕಿತ್ತು. ಆದರೆ ರೇವಣ್ಣಗೆ ಅಧಿಕಾರ ಹೋಗಿಲ್ಲ. ಕುಮಾರ ಸ್ವಾಮಿಗಿಂತ ಮೊದಲು ರೇವಣ್ಣ ರಾಜಕೀಯಕ್ಕೆ ಬಂದರೂ ಅಧಿಕಾರ ಬರಲಿಲ್ಲ ಎಂದರು.

ಈಗ ಎರಡನೇ ಪೀಳಿಗೆಯಲ್ಲಿ ಪ್ರಜ್ವಲ್ ಮತ್ತು ನಿಖಿಲ್ ಮಧ್ಯೆಯೂ ಕೂಡ ಶುರುವಾಗಿದೆ. ಈ ನಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಲ್ಲಿ ಸೋಲಿಸಲು ಲಿಂಬೆ ಹಣ್ಣು ಕೆಲಸ ಮಾಡಬಹುದು ಎಂದು ವ್ಯಂಗ್ಯವಾಡಿದರು. 

'ನಿಖಿಲ್ ಎಲ್ಲಿದಿಯಪ್ಪಾ' ಎಂದ ಅರ್ಚಕ: ಈ ಮಾತು ಕೇಳಿ ಒಂದು ಕ್ಷಣ ಹೌಹಾರಿದ ಕುಮಾರಸ್ವಾಮಿ

ಇನ್ನು ಪ್ರಜ್ವಲ್ ರೇವಣ್ಣ ಅಫಿಡವಿಟ್ ಸಲ್ಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು  ಹಾಲು ಕರೆದು ಬಂದ ಆದಾಯ ಎಂದು ಹೇಳಿದ್ದಾರೆ. ಎಷ್ಟು ಹಸು, ಹಾಲು ಕೊಡುವುದು ಎಷ್ಟು ಎಂದು ಲೆಕ್ಕ ಕೊಡಲಿ. ಕೃಷಿ ಆದಾಯ ಎನ್ನುವ ಅವರು ಏನು ಬೆಳೆದರು ಎನ್ನುವುದನ್ನು ಹೇಳಿದರೆ ರಾಜ್ಯದ ಜನರಿಗಾದರೂ ಅನುಕೂಲವಾದೀತು  ಎಂದು ಸಿ.ಟಿ ರವಿ ಹೇಳಿದರು. 

ಇದೇ ವೇಳೆ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಹೋಲ್ ಸೇಲ್ , ರೀಟೈಲ್ ಬ್ಯುಸಿಲೆಸ್ ಮಾಡುತ್ತಿದೆ. ಕಳ್ಳ ಲೆಕ್ಕ ಸುಳ್ಳು ಬಿಲ್ ಮಾಡುವ ಇವರು ಈಗ ಮೋಡ ಬಿತ್ತನೆ ಮಾಡಲು ಹೊರಟಿದ್ದಾರೆ. ಇದರಿಂದರಲೂ ದುಡ್ಡು ಹೊಡೆಯುವ ಪ್ಲಾನ್ ಮಾಡಿದ್ದಾರೆ ಎಂದು ವಾಕ್ ಪ್ರಹಾರ ನಡೆಸಿದರು.