Asianet Suvarna News Asianet Suvarna News

'ರೇವಣ್ಣ ಕೊಳೆತ ನಿಂಬೆ ಹಣ್ಣು'

ರೇವಣ್ಣ ಕೊಳೆತ ನಿಂಬೆ ಹಣ್ಣು, ಅವರ ಬಗ್ಗೆ ಏನು ಅಂತ ಹೇಳಲಿ? ಬಿಜೆಪಿ ನಾಯಕನ

HD Revanna Is A Rotten Lemon says KS eshwarappa
Author
Bangalore, First Published Apr 22, 2019, 10:11 AM IST

ದಾವ​ಣ​ಗೆರೆ[ಏ.22]: ಸಚಿವ ಎಚ್‌.ಡಿ. ರೇವಣ್ಣ ಕೊಳೆತ ನಿಂಬೆ​ ಹ​ಣ್ಣಿನಂತೆ. ಅವರ ಬಗ್ಗೆ ಏನಂತ ಹೇಳಲಿ ಎಂದು ಶಾಸಕ ಕೆ.ಎ​ಸ್‌.​ ಈ​ಶ್ವ​ರಪ್ಪ ವ್ಯಂಗ್ಯ​ವಾ​ಡಿ​ದರು.

ಶಿವ​ಮೊಗ್ಗ ಕ್ಷೇತ್ರದಲ್ಲಿ ಬಿ.ವೈ.​ರಾ​ಘ​ವೇಂದ್ರರನ್ನು ಈಶ್ವ​ರಪ್ಪ ಸೋಲಿ​ಸು​ತ್ತಾ​ರೆಂಬ ಸಚಿವ ಎಚ್‌.​ಡಿ.​ರೇ​ವಣ್ಣ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಈಶ್ವ​ರಪ್ಪ, ಪಕ್ಷ​ವನ್ನು ತಾಯಿ ಅನ್ನು​ವ​ವರು ನಾವು. ತಾಯಿಗೆ ದ್ರೋಹ ಮಾಡುವ ಕೆಲಸವನ್ನು ನಾವು ಮಾಡು​ವ​ವ​ರಲ್ಲ. ಇನ್ನು ಪಕ್ಷವು ಸೋಲು​ತ್ತ​ದೆಂಬ ಚಿಂತನೆ ಮಾಡು​ವು​ದಕ್ಕೂ ಸಾಧ್ಯ​ವಿಲ್ಲ ಎಂದರು.

ಟಿಕೆಟ್‌ ಸಿಗದೆ ನಮ್ಮ ಜೊತೆ ಈಶ್ವರಪ್ಪ ಮಾತುಕತೆಗೆ ಬಂದಿದ್ದರು ಎಂಬ ರೇವಣ್ಣ ಹೇಳಿಕೆಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರು ಇನ್ನೊಮ್ಮೆ ಈ ರೀತಿ ಮಾತನಾಡಿದರೆ ನಾನು ಬೇರೆಯದೇ ಭಾಷೆ ಬಳಸಬೇಕಾಗುತ್ತದೆ ಎಂದರು. ಶಿವ​ಮೊ​ಗ್ಗ​ದಲ್ಲಿ ರಾಘ​ವೇಂದ್ರ ಗೆದ್ದ ನಂತರ ಇದೇ ನಿಂಬೆ​ಹ​ಣ್ಣಿನ ರೇವಣ್ಣ ಬಳಿ ಕರೆ​ದೊಯ್ದು ನಿಲ್ಲಿ​ಸು​ತ್ತೇವೆ. ಆಗ ರೇವಣ್ಣ ಮಾತ​ನಾ​ಡಲಿ ಎಂದರು.

ಟಿಕೆಟ್ ಗಾಗಿ ಈಶ್ವರಪ್ಪ ಸಂಪರ್ಕಿಸಿದ್ದರು, ಆದರೆ...!: ರೇವಣ್ಣ ಹೇಳಿದ ಸೀಕ್ರೆಟ್ ಏನು?

ಮೈತ್ರಿ ಧರ್ಮದ ಅರ್ಥವೇ ಗೊತ್ತಿ​ಲ್ಲದ ರೇವಣ್ಣನಿಗೆ ಪಕ್ಷದ ಬಗ್ಗೆ ಏನು ಗೊತ್ತು? ಮೈತ್ರಿ ಅಂತಾ ಹೆಸ​ರಿಗೆ ಅವ​ಮಾನಿಸುವಂತೆ ಕಾಂಗ್ರೆ​ಸ್‌-ಜೆಡಿ​ಎಸ್‌ ನಾಯ​ಕರ ವರ್ತನೆ ಇದೆ. ಆದರೆ, ಬಿಜೆಪಿಯನ್ನು ಗೆಲ್ಲಿ​ಸಲು ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸು​ತ್ತಾ​ರೆ​ಯೇ ಹೊರತು ವ್ಯಕ್ತಿ​ಯನ್ನು ಗೆಲ್ಲಿ​ಸು​ವು​ದ​ಕ್ಕಲ್ಲ. ಈ ಹಿಂದೆ ಡಿ.ಕೆ. ಶಿವಕುಮಾರ್‌ ಅವರು ರೇವಣ್ಣ ಅವರನ್ನು ಸೋಲಿಸಿದರು. ಅದರ ಅನುಭವ ಅವರಿಗಿದೆ. ಈ ಅನುಭವವನ್ನು ನಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಡಿಕೆಶಿ ಅಲ್ಲ, ಕೇಡಿ ಶಿವಕುಮಾರ್: ಈಶ್ವರಪ್ಪ ವ್ಯಂಗ್ಯ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

Follow Us:
Download App:
  • android
  • ios