ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ನಾಯಕರು ಒಂದಾಗಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದ ಜೆಡಿಎಸ್ ನಾಯಕರಿಗೆ ಮತ್ತೊಂದು ಆಘಾತ ಎದುರಾಗಿದೆ.  

ತುಮಕೂರು, (ಏ.11) : ತುಮಕೂರಿನಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಜೆಡಿಎಸ್ ಗೆ ಸಿಎಂ ಕುಮಾರಸ್ವಾಮಿ ಆಪ್ತರೊಬ್ಬರು ಬಿಜೆಪಿ ಸೇರ್ಪಡೆಯಾಗುವುದರ ಮೂಲಕ ದೇವೇಗೌಡ್ರಿಗೆ ಬಿಗ್ ಶಾಕ್ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ನಿನ್ನೆ (ಬುಧವಾರ) ಅಷ್ಟೇ ಕಾಂಗ್ರೆಸ್ ರೆಬಲ್ ನಾಯಕರಾದ ಮುದ್ದಹನುಮೇಗೌಡ ಹಾಗೂ ಕೆ.ಎನ್ .ರಾಜಣ್ಣ ಎಲ್ಲವನ್ನು ಮರೆತು ದೇವೇಗೌಡ್ರ ಪ್ರಚಾರ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ಇನ್ನೇನು ಮೈತ್ರಿ ನಾಯಕರಲ್ಲಿ ಇದ್ದ ಅಸಮಾಧಾನ ಶಮನವಾಗಿದೆ ಎನ್ನುವಷ್ಟರಲ್ಲಿಯೇ ಜೆಡಿಎಸ್ ಗೆ ಮತ್ತೊಂದು ಆಘಾತ ಎದುರಾಗಿದೆ.

ದೋಸ್ತಿ ಪಡೆಗೆ ತುಮಕೂರಲ್ಲಿ ಕೊನೆ ಕ್ಷಣದ ಸರ್ಪೈಸ್ ಕೊಟ್ಟ ರೆಬಲ್ಸ್!

ಸಿಎಂ ಎಚ್.ಡಿ.ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚಿದಾನಂದ ಗೌಡ ಅವರು ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ.

ಜೆಡಿಎಸ್ ಪ್ರಬಲ ನಾಯಕ ಚಿದಾನಂದ ಗೌಡ ಅವರು ಶಿರಾ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆದರೆ ಇದೀಗ ಚಿದಾನಂದ ಅವರು ಇಂದು (ಗುರುವಾರ) ಶಾಸಕ ವಿ. ಸೋಮಣ್ಣ ಸಮ್ಮುಖದಲ್ಲಿ ಬಿಜೆಪಿಗೆ ಸೇರಿರುವುದು ದಳಪತಿಗಳಿಗೆ ಹಿನ್ನಡೆಯಾಗಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.