ನಾಮಪತ್ರದಲ್ಲಿ ಪತ್ನಿ ಕಾಲಂನಲ್ಲಿ ತಂದೆ ಹೆಸರು ಹಾಕಿದ ಸಿಎಂ ನಾಯ್ಡು ಹಾಗೂ ಪುತ್ರ ಲೋಕೇಶ್
ಅಮರಾವತಿ[ಮಾ.25]: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ನಾರಾ ಲೋಕೇಶ್ ನಾಮಪತ್ರ ಸಲ್ಲಿಕೆ ವೇಳೆ ಎಡವಟ್ಟು ಮಾಡಿಕೊಂಡಿದ್ದು, ಭಾರೀ ಮುಖಭಂಗಕ್ಕೆ ಕಾರಣವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಂದ್ರಬಾಬು ನಾಯ್ಡು ಅವರು ತಮ್ಮ ಪತಿ/ಪತ್ನಿ ಹೆಸರು ಬರೆಯಬೇಕಾದ ಜಾಗದಲ್ಲಿ ತಮ್ಮ ತಂದೆಯ ಹೆಸರು ಖರ್ಜೂರ ನಾಯ್ಡು ಎಂದು ನಮೂದಿಸಿದ್ದಾರೆ. ಅದೇ ರೀತಿ ನಾರಾ ಲೋಕೇಶ್ ಅವರ ನಾಮಪತ್ರದಲ್ಲಿ, ಅವರು ತಮ್ಮ ಪತಿ/ಪತ್ನಿಯ ಹೆಸರು ಬರೆಯಬೇಕಾದ ಜಾಗದಲ್ಲಿ ತಂದೆ ಚಂದ್ರಬಾಬು ನಾಯ್ಡು ಹೆಸರು ನಮೂದಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಈ ಎಡವಟ್ಟು ಗಮನಕ್ಕೆ ಬಂದು, ಇಬ್ಬರೂ ನಾಯಕರು ಮುಜುಗರ ಅನುಭವಿಸುವಂತೆ ಆಯಿತು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
