ಬೆಂಗಳೂರು[ಮಾ.26]: ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಾಬೂರಾವ್ ಚವ್ಹಾಣ್ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವ ಸಿದ್ಧಾಂತ ಕೇವಲ ಬಾಯಿ ಮಾತಿಗಷ್ಟೆ ಎಂದು ಹರಿಹಾಯ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿಯ ಗ್ರಾಮಾಂತರ ಕ್ಷೇತ್ರಕ್ಕೆ ಟಿಕೆಟ್ ಅಕಾಂಕ್ಷಿ ಆಗಿದ್ದೆ. ಆದರೆ, ಐಪಿಎಲ್ ಬೆಟ್ಟಿಂಗ್ ಬುಕ್ಕಿ ಬಸವರಾಜ್ ಮತ್ತಿಮೂಡ ಅವರಿಗೆ ಟಿಕೆಟ್ ನೀಡಿದರು. ರೇವೂನಾಯಕ್ ಬೆಳಮಗಿ ಸೋಲಿಸು ವುದಕ್ಕೆ ತಮ್ಮನ್ನು ಕಾಂಗ್ರೆಸ್‌ನಿಂದ ಕೆಜೆಪಿಗೆ ಕರೆತಂದ ಯಡಿಯೂರಪ್ಪ, ಇದೀಗ ತಮ್ಮನ್ನು ಮುಗಿಸುವುದಕ್ಕೆ ಶಾಸಕ ಉಮೇಶ್ ಜಾಧವ್ ಅವರನ್ನು ಕರೆತಂದು ಲೋಕಸಭಾ ಟಿಕೆಟ್ ನೀಡಿದ್ದಾರೆ. ಈ ಒಡೆದು ಆಳುವ ನೀತಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದರು.

ಲಂಬಾಣಿ ಸಮಾಜದ ಮತ ಸೆಳೆಯಲು ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಮಾಸ್ಟರ್ ಪ್ಲ್ಯಾನ್ ಿದಾಗಿದೆ ಎನ್ನಲಾಗಿದೆ. ಅಲ್ಲದೇ ಲಂಬಾಣಿ ಸಮಾಜದ ನಾಯಕ ಬಾಬುರಾವ್ ಚವ್ಹಾಣ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಖಚಿತ ಎನ್ನಲಾಗಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ