ಬೆಂಗಳೂರು[ಏ. 07]  ಮಂಡ್ಯದ ರೆಬಲ್ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ರೆಬಲ್ ಮುಖಂಡರು ಮಾತುಕತೆಗೆ ಬಗ್ಗಿಲ್ಲ.

ಮಂಡ್ಯ ಚುನಾವಣೆಯಲ್ಲಿ ನಮ್ಮದೇನು ಪಾತ್ರ ಇರಲ್ಲ. ನಮ್ಮ ಪಾಡಿಗೆ ನಾವಿದ್ದೇವೆ. ಇಂದಿನ ಸಭೆಯಲ್ಲಿ‌ ಪಕ್ಷದ ಅಧ್ಯಕ್ಷರು ಮತ್ತು  ಸಿದ್ದರಾಮಯ್ಯ ಕೆಲ ಸಲಹೆ ನೀಡಿದ್ದಾರೆ. ನಾವು ಕಾರ್ಯಕರ್ತರೊಂದಿಗೆ ಚರ್ಚಿಸಿ ಅವರು ಏನು ತಿಳಿಸಬೇಕೋ ತಿಳಿಸ್ತೇವೆ. ಪಕ್ಷ ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡ್ರೆ ಅದನ್ನ ಆಶೀರ್ವಾದ ಅಂದುಕೊಳ್ತೇವೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಹಣದ ಮಾತು: JDS ಮಿನಿಸ್ಟರ್-ಮಾಜಿ ಸಂಸದ ಆಡಿಯೋ ವೈರಲ್..!

ಸಿಎಂ ಕುಮಾರಸ್ವಾಮಿ ಅವರೆ ಕರೆದು ಮಾತನಾಡಲಿ ಎಂಬ ಬೇಡಿಕೆಯನ್ನು ನಾಯಕರು ಇಟ್ಟಿದ್ದಾರೆ ಎನ್ನಲಾಗಿದೆ. ನಮ್ಮ ಅಗತ್ಯ ಇದೆಯೋ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.