ಬೆಂಗಳೂರು[ಏ. 27] ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ಮತದಾನ ಮಾಡದ ರಮ್ಯಾ ವೋಟಿಂಗ್ ಮಾಡದೆ ಹ್ಯಾಟ್ರಿಕ್ ಸಾಧಿಸಿದರು ಎಂದು ನಾಗರಿಕರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ವಿರುದ್ಧ ಕಮೆಂಟ್ ಗಳ ಸುರಿಮಳೆಯಾಗಿತ್ತು.

ಆದರೆ ರಮ್ಯಾ ಅಭಿಮಾನಿಗಳು ಮಾತ್ರ ಒಂದು ಕಾಲದ ಸ್ಯಾಂಡಲ್ ವುಡ್ ನಂಬರ್ ಒನ್ ತಾರೆಯನ್ನು ಬಿಟ್ಟುಕೊಟ್ಟಿಲ್ಲ.  ರಮ್ಯಾ ಮತದಾನ ಮಾಡಿದ್ದಾರೆ ಎನ್ನುವುದು ಅವರ ವಾದ. ರಮ್ಯಾ ಮತ ಹಾಕಿಲ್ಲ ಎಂದು ಹೇಳಿದರವಿಗೆ ತಿರುಗೇಟು ನೀಡುವ ಕೆಲಸವನ್ನು ಅಭಿಮಾನಿಗಳು ಮಾಡಿದ್ದಾರೆ.

ಈ ಹುಡುಗನ ಕೆನ್ನೆ ಗಿಲ್ಲಬೇಕು ಎಂದ ರಮ್ಯಾಗೆ ಭರಪೂರ ಪ್ರತಿಕ್ರಿಯೆ

ಮಂಡ್ಯದಲ್ಲಿ ರಮ್ಯಾ ಮತ ಹಾಕದಿದ್ದರೆ ಏನು? ಬೇರೆ ಕಡೆ ವೋಟಿಂಗ್ ಮಾಡಿರಬಹುದು ಎಂಬ ಸಂಭವನೀಯತೆಯನ್ನು ತೆರೆದಿಟ್ಟಿದ್ದಾರೆ. ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಸಂದರ್ಭ ಎಲ್ಲರೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಿಕೊಳ್ಳಿ ಎಂದು ಟ್ವಿಟರ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ರಮ್ಯಾ ಮಾಡಿದ್ದರು. ಇದಕ್ಕೂ ಸಹ ಜನರು ತಿರುಗೇಟು ನೀಡಿದ್ದರು.