ಬೆಂಗಳೂರು[ಮಾ. 01]  ಸುಮಲತಾ ಜೊತೆ ಡಿನ್ನರ್ ಪಾರ್ಟಿಗೆ ಮಂಡ್ಯದ ಕಾಂಗ್ರೆಸ್ ಮುಖಂಡರು ಸೇರಿದ್ದು ಗಮನಿಸಿದ್ದೇನೆ. ಉಟಕ್ಕಾಗಿ ಸೇರಿದ್ದಾರೆ. ಯಾರೇ ಕರೆದ್ರು ಊಟಕ್ಕೆ ಹೋಗುವ ಪರಿಸ್ಥಿತಿ ಈಗ ರಾಜಕಾರಣದಲ್ಲಿ ನಿರ್ಮಾಣವಾಗಿದೆ. ಚುನಾವಣೆ ಮುಗಿದ ಮೇಲೆ ಎಲ್ಲರೂ ಉಟಕ್ಕೆ ಸೇರಿದ್ದಾರೆ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲೇ ಸೇರಿದ್ರೆ ಈ ವಿಚಾರ ಗಂಭೀರತೆ ಪಡೆಯುತ್ತಿತ್ತು. ಇದರಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗಲ್ಲ. ಚಲುವರಾಯಸ್ವಾಮಿ ಅಂಡ್ ಟೀಂ ಮೈತ್ರಿ ಧರ್ಮ ಪಾಲಿಸುವ ವಿಚಾರದಲ್ಲಿ ಮೊದಲೇ ಹೇಳಿಕೊಂಡಿದ್ರು. ಚುನಾವಣೆಯಿಂದ ಅವರು ದೂರ ಇರೋದಾಗಿ ಹೇಳಿದ್ರು. ಮಂಡ್ಯದಲ್ಲಿ ಮೈತ್ರಿ ಧರ್ಮ ಪಾಲಿಸದ ಹಲವರ ಮೇಲೆ ಕಾಂಗ್ರೆಸ್ ಕ್ರಮ ಕೈಗೊಂಡಿದೆ ಎಂದರು.

Video: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ 'ಮಂಡ್ಯ ಮಹಾ ಘಟಬಂಧನ್'

ಪಕ್ಷದ ನಿರ್ಧಾರದ ವಿರುದ್ಧ ಯಾರೇ ತಪ್ಪು ಮಾಡಿದ್ರು ಕ್ರಮ ಕೈಗೊಳ್ಳಲು ಶಸ್ತು ಸಮಿತಿ ವರದಿ ಪಡೆದು ನಂತರ ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಳ್ತಾರೆ. ಈ ವಿಚಾರದಲ್ಲಿ ಶಿಸ್ತು ಸಮಿತಿ ಏನು ವರದಿ ನೀಡುತ್ತೆ ನೋಡೊಣ. ಯಾರೇ ತಪ್ಪು ಮಾಡಿದ್ರು ವರದಿ ಪಡೆದು ಕೆಪಿಸಿಸಿ ಅಧ್ಯಕ್ಷರು ಪರಿಶೀಲನೆ ನಡೆಸ್ತಾರೆ. ಮಂಡ್ಯ ಕಾಂಗ್ರೆಸ್ ಟೀಂ ಸಮರ್ಥಿಸಿಕೊಂಡ ಡಿಸಿಎಂ ಪರಮೇಶ್ವರ್ ಉಟಕ್ಕೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.

ಜಿ.ಟಿ ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ, ಜಿ.ಟಿ.ದೇವೇಗೌಡ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಾಗ್ತಿಲ್ಲ. ಕಾಂಗ್ರೆಸ್ ಪರ ಕೆಲಸ ಮಾಡಿಲ್ಲ ಅನ್ನೋ ಅರ್ಥದಲ್ಲಿ ಮಾತಾಡಿದ್ದಾರೆ. ಕಾಂಗ್ರೆಸ್ ಮೈತ್ರಿ ಧರ್ಮದ ಪ್ರಕಾರ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಿದೆ. ಆದ್ರೆ ಜಿ.ಡಿ ದೇವೇಗೌಡರ ಹೇಳಿಕೆ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ಕೇಳಲಿದೆ ಎಂದು ಹೇಳಿದರು.