ಬೆಂಗಳೂರು (ಮಾ. 25): ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ.

ಬಿಜೆಪಿ ಕೋಟೆಯಲ್ಲಿ ಸುರೇಶ್ ಅಂಗಡಿಗೆ ಪೈಪೋಟಿ ನೀಡ್ತಾರಾ ಕಾಂಗ್ರೆಸ್ ಅಭ್ಯರ್ಥಿ?

9 ಲೋಕಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ 19 ಕ್ಷೇತ್ರಗಳಲ್ಲಿ ಸಮರಕ್ಕೆ ರಾಜಕೀಯ ಪಕ್ಷಗಳ ಸೇನಾನಿಗಳು ಸಜ್ಜಾಗಿದ್ದಾರೆ. ಕಲಬುರಗಿಯಲ್ಲಿ ಹೇಗಿದೆ ಚುನಾವಣಾ ಅಖಾಡ? ಇಲ್ಲಿದೆ ಮಾಹಿತಿ. 

ಸುಮಲತಾ ‘ಅಂಬರೀಷ್ ಹೆಸ್ರು’ ಚ್ಯಾಲೆಂಜ್‌ಗೆ ಖಡಕ್ ಎಚ್‌ಡಿಕೆ ತಿರುಗೇಟು

ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯಿಂದ ಡಾ.ಉಮೇಶ ಜಾಧವ್ ಮಧ್ಯೆ ‘ಜಂಗೀ ಕುಸ್ತಿ’ಗೆ ಅಖಾಡ ಸಿದ್ಧವಾಗಿದೆ. ಜಾತಿವಾರು ಮತಗಳ ಲೆಕ್ಕಾಚಾರ ಚುರುಕಾಗಿದ್ದು ಬಂಜಾರಾ ಸಮಾಜದ ಉಮೇಶ ಜಾಧವ್‌ರೊದಿಗೆ ಹಿಂದುಳಿದ ವರ್ಗದ ಮಾಲೀಕಯ್ಯ ಗುತ್ತೇದಾರ್, ಕೋಲಿ ಸಮಾಜದ ಬಾಬೂರಾವ ಚಿಂಚನ್‌ಸೂರ್, ವೀರಶೈವ ಲಿಂಗಾಯಿತ ಸಮಾಜದ ವಿಶ್ವನಾಥ ಪಾಟೀಲ್ ಹೆಬ್ಬಾಳ, ಡಾ.ಎ.ಬಿ.ಮಾಲಕರೆಡ್ಡಿ ಸೇರಿದಂತೆ ಅನೇಕರು ಬಿಜೆಪಿ ಬತ್ತಳಿಕೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೂ ಅಹಿಂದ ಸಮುದಾಯದ ಪ್ರಮುಖರು ಇದ್ದಾರೆ.