ಬೀದರ್ ನಾಡಿನ ಜನತೆ ’ಕೈ’ ಹಿಡಿತಾರಾ? ಕಮಲ ಅರಳಿಸ್ತಾರಾ?
ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ. ಬೀದರ್‌ನಲ್ಲಿ ಹೇಗಿದೆ ಚುನಾವಣಾ ಅಖಾಡ? ಇಲ್ಲಿದೆ ಮಾಹಿತಿ.
ಬೆಂಗಳೂರು (ಮಾ. 25): ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ.
Next ಮೋದಿಯೇ ಪ್ರಧಾನಿ ಎಂದಿದ್ದ 'ಪೂಜಾರಿ' ಕಾಂಗ್ರೆಸ್ ಗೆಲ್ಲಿಸಲು ಮಹಾ ಶಪಥ..!
9 ಲೋಕಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ 19 ಕ್ಷೇತ್ರಗಳಲ್ಲಿ ಸಮರಕ್ಕೆ ರಾಜಕೀಯ ಪಕ್ಷಗಳ ಸೇನಾನಿಗಳು ಸಜ್ಜಾಗಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಕಸರತ್ತು ತಲೆ ಬಿಸಿ ತಂದಿದ್ದರೆ, ಇನ್ನೂ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಸಮಸ್ಯೆಯಾಗಿದೆ. ಜೆಡಿಎಸ್‌ಗೆ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಇದರ ನಡುವೆ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ತಿಕ್ಕಾಟ ತೀವ್ರಗೊಳ್ಳುತ್ತಿದೆ. ಬೀದರ್ ನಲ್ಲಿ ಚುನಾವಣಾ ಅಖಾಡ ಹೇಗೆ ಸಿದ್ಧವಾಗಿದೆ? ಇಲ್ಲಿದೆ ಮಾಹಿತಿ.
ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಯಾರ ಬಾಯಿಗೆ?
ಕಾಂಗ್ರೆಸ್‌ನಿಂದ ಈಶ್ವರ ಖಂಡ್ರೆ ಕಣಕ್ಕಿಳಿಯಲಿದ್ದರೆ ಬಿಜೆಪಿಯಿಂದ ಸಂಸದ ಭಗವಂತ ಖೂಬಾ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಲಿದ್ದಾರೆ. ಬೀದರ್ ಶರಣರ ನಾಡಾಗಿದ್ದರೂ ಇಲ್ಲಿ ಜಾತಿಯದ್ದೇ ಲೆಕ್ಕಾಚಾರ. ಲಿಂಗಾಯತ ಸಮುದಾಯದ ಹಾಲಿ ಸಂಸದ ಭಗವಂತ ಖೂಬಾ ಬಿಜೆಪಿಯಿಂದ ಕಣಕ್ಕಿಳಿದರೆ ಇನ್ನೋರ್ವ ಲಿಂಗಾಯತರನ್ನು ಕಣಕ್ಕಿಳಿಸಿ ಬಲಾಢ್ಯ ಲಿಂಗಾಯತ ಮತ ಕಸಿದು ತನ್ನ ಪಾರಂಪರಿಕ ಮತಗಳೊಂದಿಗೆ ಜಯಭೇರಿ ಬಾರಿಸುವ ಲೆಕ್ಕಾಚಾರದತ್ತ ಕಾಂಗ್ರೆಸ್ ವಾಲಿರುವುದು ಇಲ್ಲಿ ಸ್ಪಷ್ಟ. ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಪರಿಣಾಮ ಬೀರುವ ಸಾಧ್ಯತೆ ಇದೆ.