ಕೋಲಾರ, (ಏ.17): ರಾಜ್ಯದಲ್ಲಿ ಮೊದಲು ಹಂತದ ಲೋಕಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಕೋಲಾರ ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರು ಮುಳಬಾಗಿಲು ಜಿಲ್ಲಾ ಪಂಚಾಯಿತಿಯ 3 ಸದಸ್ಯರು ಸೇರಿದಂತೆ 8 ನಾಯಕರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. 

ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸಿಗರಿಂದ ಬಿಜೆಪಿಗೆ ಬೆಂಬಲ?

ಪಕ್ಷ ವಿರೋಧಿ ಚಟುವಟಿಕೆ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಪ್ರಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ. 

* ಪ್ರಕಾಶ್ ರಾಮಚಂದ್ರ (ಜಿ.ಪಂಚಾಯಿತಿ ಸದಸ್ಯ) * ನಾಗಮಣಿ (ಜಿ.ಪಂಚಾಯಿತಿ ಸದಸ್ಯೆ) * ಕೃಷ್ಣಪ್ಪ (ಜಿ.ಪಂಚಾಯಿತಿ ಸದಸ್ಯ) * ವಿವೇಕಾನಂದ (ಎಪಿಎಂಸಿ ಸದಸ್ಯ) * ಗಂಗಿ ರೆಡ್ಡಿ (ಪಿಎಲ್‌ಡಿ ಬ್ಯಾಂಕ್) * ಶ್ರೀನಾಥ್ (ಪಿಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ) * ಶ್ರೀನಿವಾಸ್ (ತಾ.ಪಂಚಾಯಿತಿ ಸದಸ್ಯ) * ಮಂಜುನಾಥ್ (ಎಪಿಎಂಸಿ ಅಧ್ಯಕ್ಷ) ಎನ್ನುವರು ಅಮಾನತುಗೊಂಡಿದ್ದಾರೆ.

ಮಂಡ್ಯದಲ್ಲಿಯೂ ಸಹ ಕಾಂಗ್ರೆಸ್ ಇದೇ ತಂತ್ರವನ್ನು ಅನುಸರಿಸಿತ್ತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸುತ್ತಿದ್ದ  ಜಿಲ್ಲೆಯ ಏಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತುಗೊಳಿಸಿತ್ತು. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.