ಕೋಲಾರ: ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸಬೇಕಾದರೆ ನನ್ನನ್ನು ಸೋಮವಾರದೊಳಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿ ಕೊಳ್ಳಬೇಕು, ಇಲ್ಲದೇ ಹೋದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ಆರ್. ವರ್ತೂರು ಪ್ರಕಾಶ್ ತಾಕೀತು ಮಾಡಿದರು.

ಕೋಲಾರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆ.ಎಚ್.ಮುನಿಯಪ್ಪ ಕೆಲಸ ಆಗುವವರೆಗೂ ಕಾಲು ಹಿಡಿಯುತ್ತಾರೆ, ಕೆಲಸವಾದ ನಂತರ ಕಾಲು ಎಳೆಯುತ್ತಾರೆ. 

ಅವರಿಗೆ ಬೆಂಬಲ ನೀಡಬೇಕಾದರೆ, ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು, ಇಲ್ಲವಾದರೆ ಮಂಗಳವಾರ ನನ್ನ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು. ಇನ್ನು ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಿಂದ ಬಂದಿದ್ದ ಒಬ್ಬೊಬ್ಬ ಕಾರ್ಯಕರ್ತರಲ್ಲಿ ಕೆಲವರು ಬಿಜೆಪಿಯನ್ನು ಬೆಂಬಲಿಸ ಬೇಕೆಂದು ಒತ್ತಾಯಿಸಿದರು.