ಈ ಬಾರಿಯಾದ್ರೂ ಮಾಜಿ ಸಂಸದೆ ಮತ ಹಾಕ್ತಾರಾ... ಎಲ್ಲಿದೆ ವೋಟಿಂಗ್?

ಮಂಡ್ಯದಲ್ಲಿ ಏಪ್ರಿಲ್ 18  ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು ಈ ಬಾರಿ ಮಾಜಿ ಸಂಸದೆ ರಮ್ಯಾ ಮತದಾನಕ್ಕೆ ಬರುತ್ತಾರೋ? ಇಲ್ಲವೋ? ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.

Congress Social Media Head Ramya can Vote in Mandya

ಮಂಡ್ಯ [ಏ. 17]:  ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಟ್ವೀಟ್​ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಸುವ ರಮ್ಯಾ ದಿವ್ಯ ಸ್ಪಂದನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಿಕೊಳ್ಳಿ ಎಂದು  ಟ್ವಿಟ್  ಮಾಡಿ ಜನರಿಂದ ಟೀಕೆಗೆ ಗುರಿಯಾಗಿದ್ದರು.

2018 ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೇ ದೂರ ಉಳಿದಿದ್ದ ಮಾಜಿ ಸಂಸದೆ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆಯೂ ಮತದಾನಕ್ಕೆ ಬಂದಿರಲಿಲ್ಲ.ಹಿಂದೊಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಮ್ಯಾ ನಂತರ ಬದಲಾದ ರಾಜಕಾರಣದ ವಾತಾವರಣದಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜವಾಬ್ದಾರಿ ಹೊತ್ತುಕೊಂಡಿದ್ದರು.

ಈ ಹುಡುಗನ ಕೆನ್ನೆ ಗಿಲ್ಲಬೇಕು ಎಂದ ರಮ್ಯಾಗೆ ಭರಪೂರ ಪ್ರತಿಕ್ರಿಯೆ

ಮಂಡ್ಯದಿಂದ ಮನೆಯನ್ನು ಖಾಲಿ ಮಾಡಿದ್ದ ರಮ್ಯಾ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಸಂವಾದದಲ್ಲಿ ಕಾಣಿಸಿಕೊಂಡಿದ್ದರು. ರಮ್ಯಾ ತಮ್ಮ ಮತದಾನದ ವಿವರ ಬದಲಾಯಿಸಿದ್ದಾರೆ ಎನ್ನಲಾಗಿತ್ತು. ಆದರೆ ರಮ್ಯಾ ವೋಟಿಂಗ್ ಮಂಡ್ಯದಲ್ಲಿಯೇ ಇದೆ.  ಈ ಬಾರಿಯೂ ರಮ್ಯಾ ವೋಟಿಂಗ್ ಮಾಡಲ್ಲ ಎಂದು ಅವರ ಆಪ್ತ ವಲಯ ಹೇಳಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Latest Videos
Follow Us:
Download App:
  • android
  • ios