ಬೆಂಗಳೂರು[ಮಾ. 29] ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾರ್ಗರೇಟ್ ಆಳ್ವಾ, ಬೆಂಗಳೂರು ದಕ್ಷಿಣಕ್ಕೆ ಬಿಜೆಪಿ ಎಂತಹ ಅಭ್ಯರ್ಥಿಯನ್ನ ಹಾಕಿದೆ ನೋಡಿ?  ತೇಜಸ್ವಿ ಭೂಗತವಾಗಿ ಶಸ್ತ್ರಾಸ್ತ್ರ ತಯಾರು ಮಾಡುವ ಪೋಟೋ ವೈರಲ್ ಆಗ್ತಿದೆ. ಅವನದ್ದು ಕೆಟ್ಟ ಮಾದರಿಯ ಹಿಂದುತ್ವ. ಅನಂತ್ ಕುಮಾರ್ ಪತ್ನಿ ಬದಲಿಗೆ ತೇಜಸ್ವಿಗೆ ಟಿಕೆಟ್  ಕೊಟ್ಟಿದ್ದಾರೆ.  ಸಾಮಾಜಿಕವಾಗಿ ಎಷ್ಟೋ ಕೆಲಸವನ್ನು ತೇಜಸ್ವಿನಿ ಅನಂತ್ ಕುಮಾರ್  ಮಾಡಿದ್ದಾರೆ. ನಿಮ್ಮ ಪಕ್ಷದ ಮಹಿಳೆಗೆ ಯಾಕೆ ಬೆಂಬಲ ಇಲ್ಲ ಎಂದು ಪ್ರಶ್ನೆ ಮಾಡಿದರು.

ಅಪಸ್ವರ ಎತ್ತಿದ್ದ 'ಕೈ' ನಾಯಕ ಪ್ರಜ್ವಲ್ ಪ್ರಚಾರಕ್ಕೆ ಸಾಥ್!

ಕೆಟ್ಟ ರೀತಿಯ ಹಿಂದುತ್ವ ಅನುಸರಿಸುವ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಅನಂತ‌‌ ಕುಮಾರ್ ಪತ್ನಿಗೆ ಟಿಕೆಟ್ ನೀಡಬಹುದಿತ್ತು. ಹಾಗೆ ಮಾಡಿದಿದ್ರೆ ಮಹಿಳೆಗೆ ಟಿಕೆಟ್ ನೀಡಿದಂತಾಗುತ್ತಿತ್ತು. ಮಂಡ್ಯದಲ್ಲಿ ಅಂಬರೀಶ್ ಪತ್ನಿ ಸುಮಲತಾಗೆ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ. ಆದರೆ, ಇತ್ತ ಬೆಂಗಳೂರು ದಕ್ಷಿಣದಲ್ಲಿ ನಿಮ್ಮದೇ ಪಕ್ಷದ ಮಹಿಳೆಯನ್ನು ಬೆಂಬಲಿಸಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಅನಂತ್ ಕುಮಾರ್ ಹೆಗಡೆ ವಿರುದ್ಧ 36 ಕ್ರಿಮಿನಲ್ ಪ್ರಕರಣಗಳಿವೆ. ಮುಸ್ಲಿಂ, ಕ್ರೈಸ್ತರ ಮತ ಬೇಡ ಎಂದು ಪ್ರಚೋದನಾಕಾರಿ ಹೇಳಿಕೆ ನೀಡುವ ವ್ಯಕ್ತಿ ಆತ. ನನಗೆ ಹಿಂದೂಗಳ ಮತ ಮಾತ್ರ ಸಾಕು ಎಂದು ಹೇಳುವಾತ. ಹೀಗಾಗಿ ದೇಶ ಯಾವ ಪರಿಸ್ಥಿತಿಗೆ ಹೋಗುತ್ತಿದೆ ಎಂಬುದನ್ನು ‌ಅರಿಯಬೇಕು ಎಂದು ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಮೇಲೆ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.