ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ| ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾದ ರಣಜೀತ್ ಸಿಂಗ್ ನಾಯ್ಕ್ ನಿಂಬಾಳ್ಕರ್
ಮುಂಬೈ[ಮಾ.26]: ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ನಾಯಕ ರಣಜೀತ್ ಸಿಂಗ್ ನಾಯ್ಕ್ ನಿಂಬಾಳ್ಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಾಂಗ್ರೆಸ್ ನ ಸತಾರಾ ಜಿಲ್ಲಾಧ್ಯಕ್ಷ ನಾಯ್ಕ್ ನಿಂಬಾಳ್ಕರ್ ರವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ಕಂದಾಯ ಸಚಿವ ಚಂದ್ರ ಕಾಂತ್ ಪಾಟೀಲ್ ಹಾಗೂ ಇನ್ನಿತರ ನಾಯಕರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ರಾಧಾಕೃಷ್ಣ ವಿಕೆ ಪಾಟೀಲ್ ಪುತ್ರ ಸುಜಯ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದರು.
NCP ವಿರುದ್ಧ ವಾಗ್ದಾಳಿ ನಡೆಸಿದ ನಾಯ್ಕ್ ನಿಂಬಾಳ್ಕರ್ ನನ್ನ ಹೋರಾಟ ಏನೇ ಇದ್ದರೂ ಅದು ಬಾರಾಮತಿ ಕ್ಷೇತ್ರದ ನಾಯಕರ ವಿರುದ್ಧ. ಬಾರಾಮತಿ ಕ್ಷೇತ್ರ NCP ನಾಯಕ ಶರದ್ ಪವಾರ್ ರವರ ಭದ್ರಕೋಟೆ ಎಂಬುವುದು ಗಮನಾರ್ಹ. ಇದೇ ಸಂದರ್ಭದಲ್ಲಿ ನಿಂಬಾಳ್ರ್ ಮಹಾರಾಷ್ಟ್ರ ಸಿಎಂ ಫಡ್ನವೀಸ್ ರ್ನನು ಹಾಡಿ ಹೊಗಳಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
