ನವದೆಹಲಿ/ಬೆಂಗಳೂರು, (ಮಾ.23): 17ನೇ ಲೋಕಸಭಾ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್ ತನ್ನಅಭ್ಯರ್ಥಿಗಳ  8ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕದ 28 ಕ್ಷೇತ್ರಗಳಿಗೆ ಸಂಬಂಧಿಸಿದಂತೆ 8 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ತನ್ನ ಪಾಲಿನ 20 ಕ್ಷೇತ್ರಗಳ ಪೈಕಿ ಒಟ್ಟು 18 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಘೋಷಿಸಿದೆ. 

ಕರ್ನಾಟಕ ಬಿಜೆಪಿಯ 2ನೇ ಪಟ್ಟಿ ರಿಲೀಸ್, ಮಂಡ್ಯದಲ್ಲಿ ಸುಮಲತಾಗೆ ಬೆಂಬಲ

ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್​ ಘೋಷಿಸಿಲ್ಲ. ಇನ್ನು ಘೋಷಿತ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.

1.ಚಿಕ್ಕೋಡಿ- ಪ್ರಕಾಶ್ ಹುಕ್ಕೇರಿ
2.ಬೆಳಗಾವಿ-ವಿರೂಪಾಕ್ಷಿ ಎಸ್. ಸಧುಣ್ಣನವರ್.
3. ಬಾಗಲಕೋಟೆ-ವೀಣಾ ಕಾಶೆಪ್ಪನವರ್.
4. ಕಲಬುರಗಿ- ಮಲ್ಲಿಕಾರ್ಜುನ ಖರ್ಗೆ.
5.ರಾಯಚೂರು-ಬಿ.ವಿ.ನಾಯಕ್.
6.ಬೀದರ್-ಈಶ್ವರ್ ಖಂಡ್ರೆ.
7.ಕೊಪ್ಪಳ-ರಾಜಶೇಖರ್ ಹಿಟ್ನಾಳ್
8. ಬಳ್ಳಾರಿ-ವಿ.ಎಸ್.ಉಗ್ರಪ್ಪ
9.ಹಾವೇರಿ- ಡಿ.ಆರ್.ಪಾಟೀಲ್.
10.ದಾವಣಗೆರೆ-ಶಾಮನೂರು ಶಿವಶಂಕ್ರಪ್ಪ.
11.ದಕ್ಷಿಣ ಕನ್ನಡ- ಮಿಥುನ್ ರೈ.
12.ಚಿತ್ರದುರ್ಗ-ಬಿ.ಎನ್.ಚಂದ್ರಪ್ಪ
13.ಮೈಸೂರು-ವಿಜಯ್ ಶಂಕರ್
14.ಚಾಮರಾಜನಗರ-ಧೃವನಾರಾಯಣ
15. ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್
16.ಬೆಂಗಳೂರು ಕೇಂದ್ರ- ರಿಜ್ವಾನ್ ಹರ್ಷದ್.
17. ಚಿಕ್ಕಬಳ್ಳಾಪುರ-ಎಂ.ವೀರಪ್ಪಮೋಯಿಲಿ.
18. ಕೋಲಾರ-ಕೆ.ಎಚ್.ಮುನಿಯಪ್ಪ

ಜೆಡಿಎಸ್ ಪಾಲಿನ 8 ಕ್ಷೇತ್ರಗಳನ್ನು ನೋಡುವುದಾದರೆ
1.ಹಾಸನ- ಪ್ರಜ್ವಲ್ ರೇವಣ್ಣ
2. ಮಂಡ್ಯ-ನಿಖಿಲ್ ಕುಮಾರಸ್ವಾಮಿ
3.ತುಮಕೂರು-ಎಚ್.ಡಿ.ದೇವೇಗೌಡ.
4.ಬೆಂಗಳೂರು ಉತ್ತರ- ಅಭ್ಯರ್ಥಿ ಹೆಸರು ಪ್ರಕಟವಾಗಿಲ್ಲ
5. ಉಡುಪಿ-ಚಿಕ್ಕಮಗಳೂರು-ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಜೆಡಿಎಸ್ ನಿಂದ ಸ್ಪರ್ಧೆ
6.ವಿಜಯಪುರ-ಪ್ರಕಟವಾಗಿಲ್ಲ
8.ಉತ್ತರ ಕನ್ನಡ- ಪ್ರಕಟವಾಗಿಲ್ಲ.