Asianet Suvarna News Asianet Suvarna News

ಕರ್ನಾಟಕ ಬಿಜೆಪಿಯ 2ನೇ ಪಟ್ಟಿ ರಿಲೀಸ್, ಮಂಡ್ಯದಲ್ಲಿ ಸುಮಲತಾಗೆ ಬೆಂಬಲ

ಬಿಜೆಪಿ 5ನೇ ಪಟ್ಟಿ ಬಿಡುಗಡೆ | ವಿವಿಧ ರಾಜ್ಯಗಳ 46 ಲೋಕಸಭಾ ಕ್ಷೇತ್ರಗಳ ಬಿಜೆಪಿ ಪಟ್ಟಿ ಬಿಡುಗಡೆ | ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರು ಮಾತ್ರ ಘೋಷಿಸಿದ ಬಿಜೆಪಿ| ಕರ್ನಾಟಜ ಬಿಜೆಪಿಯ ಮೊದಲ ಪಟ್ಟಿಯಲ್ಲಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರಗಳನ್ನು ಘೋಷಿಸಲಾಗಿತ್ತು.

BJP Released Second List For karnataka Supports Sumalatha In Mandya
Author
Bengaluru, First Published Mar 23, 2019, 8:21 PM IST

ಬೆಂಗಳೂರು/ನವದೆಹಲಿ, [ಮಾ.23]:  ಲೋಕಸಭಾ ಚುನಾವಣೆ 2019 ಹಿನ್ನೆಲೆ ಬಿಜೆಪಿ ತನ್ನ 5ನೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್​​ಗೆ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಿದೆ.

ದೆಹಲಿಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಪಿ ನಡ್ಡಾ ದೇಶಾದ್ಯಂತ 46ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಈ ಪೈಕಿ ಕರ್ನಾಟಕದ 2ನೇ ಪಟ್ಟಿ ಇದಾಗಿದೆ.

ಕರ್ನಾಟಕದಲ್ಲಿ ಉಳಿದಿರುವ 7 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಪ್ರಕಟಿಸಿದರು. ಕೋಲಾರ ಲೋಕಸಭಾ ಕ್ಷೇತ್ರದಿಂದ ಮುನಿಸ್ವಾಮಿಗೆ ಟಿಕೆಟ್​ ನೀಡಲಾಗಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​ಗೆ ಬೆಂಬಲ ನೀಡಲು ಬಿಜೆಪಿ ತೀರ್ಮಾನಿಸಿದೆ.

ಮೊನ್ನೆ [ಗುರುವಾರ] ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಆದ್ರೆ ಈ ಪಟ್ಟಿಯಲ್ಲಿ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲಾಗಿತ್ತು.

ಇದೀಗ 2ನೇ ಪಟ್ಟಿ ರಿಲೀಸ್ ಆಗಿದ್ದು, 2 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಇನ್ನುಳಿದ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಿಲ್ಲ.

"

1.ಕೋಲಾರ- ಮುನಿಸ್ವಾಮಿ
2. ಮಂಡ್ಯ- ಸುಮಲತಾಗೆ ಬೆಂಬಲ
3. ಕೊಪ್ಪಳ-ಪ್ರಕಟವಾಗಿಲ್ಲ
4. ಬೆಂಗಳೂರು ಗ್ರಾಮಾಂತರ-ಪ್ರಕಟವಾಗಿಲ್ಲ
5. ಬೆಂಗಳೂರು ದಕ್ಷಿಣ-ಪ್ರಕಟವಾಗಿಲ್ಲ
6.ರಾಯಚೂರು-ಪ್ರಕಟವಾಗಿಲ್ಲ
7.ಚಿಕ್ಕೋಡಿ- ಪ್ರಕಟವಾಗಿಲ್ಲ.

Follow Us:
Download App:
  • android
  • ios