ಗೋಕಾಕ (ಏ. 23) ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವದು ಖಚಿತ ಎಂದು ರೆಬಲ್ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ನಂತರ ಮಾತನಾಡಿದ ಜಾರಕಿಹೊಳಿ,  ಮತದಾನ ಪ್ರಕ್ರಿಯೆ ಮುಗಿದಾದ ಮೇಲೆ ಸರ್ಕಾರ ಬೀಳುವ ಸಂದೇಶ ನೀಡಿದರು

ಸತೀಶ್ ಆಯ್ತು, ರಮೇಶ್ ಜಾರಕಿಹೊಳಿಗೆ ಇನ್ನೊಬ್ಬ ತಮ್ಮನಿಂದ ‘ಟೆನ್ಶನ್

ನಾನು ಸದ್ಯ ಕಾಂಗ್ರೇಸ್ ಪಕ್ಷ ಬಿಟ್ಟಿಲ್ಲ. ನನಗೂ ಶಾಸಕ ಸ್ಥಾನದ ಜವಾಬ್ದಾರಿ ಗೊತ್ತಿದೆ. ಲಖನ್ ಜಾರಕಿಹೊಳಿ ಶಾಸಕರಾದರೇ ಮೊದಲು ಖುಷಿ ಕೊಡುತ್ತದೆ. ನನ್ನಷ್ಟು ಖುಷಿ ಪಡುವವರು ಯಾರಿಲ್ಲ. ಲಖನ್ ಜಾರಕಿಹೊಳಿಗಾಗಿ ಯಾವ ತ್ಯಾಗಕ್ಕೂ ಸಿದ್ಧ. ಲಖನ್ ಜಾರಕಿಹೊಳಿ ಗೋಕಾಕ ಮತಕ್ಷೇತ್ರದಲ್ಲಿ ಸ್ಫರ್ಧೆ ಮಾಡಿದರೆ ನನಗೆ ಸ್ಫರ್ಧಿಸಲು ಬೇರೆ ಕ್ಷೇತ್ರಗಳಿವೆ ಎಂದರು.

ನಾನು ಯಾರ ಬಗ್ಗೆ ಟೀಕೆ ಮಾಡುವದಿಲ್ಲ ಎಂದ ರಮೇಶ ನಂತರ ಯಡಿಯೂರಪ್ಪ ಸಂಧಾನದ ಬಗ್ಗೆ ಪರೋಕ್ಷವಾಗಿ ಟಾಂಟ್ ನೀಡಿ ಈ ವರೆಗೆ ಕಾಂಗ್ರೇಸ್ ಪಕ್ಷದಿಂದ ಯಾರೊಬ್ಬರು ಚರ್ಚೆ ಮಾಡಿಲ್ಲ. ದಳ ಬಿಟ್ಟು ಬಂದವರಿಂದ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಆರಂಭವಾಗಿದೆ. 1999 ನಂತರ ಆಂತರಿಕ ಗೊಂದಲ ಜಾಸ್ತಿಯಾಗಿದ್ದು, ಇದೀಗ ತಾರಕಕ್ಕೇರಿದೆ. ಸಚಿವ ಸತೀಶ ಜಾರಕಿಹೊಳಿ ತೆಲೆ ಸರಿಯಿಲ್ಲ ಎಂದು ಹರಿಹಾಯ್ದರು.

ಈಗಾಗಲೇ ಸಹೋದರನೊಬ್ಬನನ್ನು ಹಾಳು ಮಾಡಿದ್ದಾನೆ. ಹತಾಶೆ ಮನೋಭಾವದಿಂದ ಮಾತನಾಡುವದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ನಾನು ಬಿಜೆಪಿ ಪರ ಮಾಡುತ್ತೆನೆ ಎಂದು ಎಲ್ಲಿ ಹೇಳಿದ್ದೆನೆ. ಕತ್ತಲಲ್ಲಿ ಕುಳಿತ ಕಲ್ಲು ಎಸೆಯುವ ಗಂಡು ನಾನಲ್ಲ ಓಪನ್ ಆಗಿ ರಾಜಕೀಯ ಮಾಡುವವನು ನಾನು ಎಂದರು.

ನಾನು ರಾಜಿನಾಮೆ ನೀಡುವದು ನಿಶ್ಚಿತ ಯಾವಾಗ ರಾಜೀನಾಮೆ ನೀಡುತ್ತೆನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಧ್ಯಮದವರಿಗೆ ತಿಳಿಸಿದರು.

ಲಖನ್ ಜಾರಕಿಹೊಳಿ ಪ್ರತಿಕ್ರೀಯೆ: ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದೆವೆ. ರಮೇಶ ಜಾರಕಿಹೊಳಿ ಬಗ್ಗೆ ಏನು ಹೇಳಲ್ಲ ಎಂದು ಲಖನ್ ಜಾರಕಿಹೊಳಿ ತಿಳಿಸಿದರು.

ಸಹೋದರ ರಮೇಶ ಜಾರಕಿಹೊಳಿ ಅವರ ಹೇಳಿಕೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವದು ನಮ್ಮ ಗುರಿ, ಅವರು ಬೇರೆ ಪಕ್ಷಕ್ಕೆ ಹೋಗಿ ಬಂದಿದ್ದಾರೆ. ನಾನು ಎಲ್ಲಿಯೂ ಹೋಗಿ ಹಾಳಾಗಿಲ್ಲ. ನಾವು ಕಾಂಗ್ರೇಸ್ ಪಕ್ಷದಲ್ಲೆ ಇರುತ್ತೆವೆ ಎಂದರು.

ಗೋಕಾಕ ಕಾಂಗ್ರೇಸ್ ಭದ್ರಕೋಟೆ. ರಮೇಶ ಜಾರಕಿಹೊಳಿ ಪ್ರೀತಿ ಹಿನ್ನಲೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದೇನೆ. ರಮೇಶ ಜಾರಕಿಹೊಳಿ ಕಾಂಗ್ರೇಸ್ ಪಕ್ಷದ ಪರ ನಿರ್ಧಾರ ಕೈಗೊಂಡ್ರೆ ಮಾತ್ರ ನನ್ನ ಬೆಂಬಲ ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.