Asianet Suvarna News Asianet Suvarna News

2 ಕ್ಷೇತ್ರಗಳಿಂದ ರಾಹುಲ್ ಸ್ಪರ್ಧೆ: ದಕ್ಷಿಣ ಭಾರತದ ಈ ಕ್ಷೇತ್ರ ಫಿಕ್ಸ್!

ಲೋಕಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಿಂದ ರಾಹುಲ್ ಸ್ಪರ್ಧೆ ಫಿಕ್ಸ್| ತವರು ಕ್ಷೇತ್ರ ಅಮೇಠಿ ಸೇರಿದಂತೆ ದಕ್ಷಿಣ ಭಾರತದ ಒಂದು ಕ್ಷೇತ್ರದಿಂದ ರಾಹುಲ್ ಕಣಕ್ಕೆ!

Congress president Rahul Gandhi to contest second seat from Wayanad in Kerala
Author
Bangalore, First Published Mar 31, 2019, 12:02 PM IST

ನವದೆಹಲಿ[ಮಾ.31]: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿ ಹಾಗೂ ಕೇರಳದ ವಯನಾಡು ಕ್ಷೇತ್ರಗಳಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಈ ಮಾಹಿತಿಯನ್ನು ಖಚಿತಪಡಿಸಿದೆ. 

ಪಕ್ಷದ ಹಿರಿಯ ನಾಯಕ ಎ. ಕೆ ಆ್ಯಂಟನಿ ಈ ವಿಚಾರವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. 'ಇದೊಂದು ಖುಷಿಯ  ವಿಚಾರ. ಕಳೆದ ಹಲವಾರು ತಿಂಗಳಿನಿಂದ ರಾಹುಲ್ ಗಾಂಧಿ ದಕ್ಷಿಣ ಭಾರತದಿಂದ ಸ್ಪರ್ಧಿಸಬೇಕು ಎಂಬ ಕೂಗು ಕೆಳಿ ಬಂದಿತ್ತು. ಕೇರಳ, ತಮಿಳುನಾಡು, ಕರ್ನಾಟಕ ಈ ಮೂರು ರಾಜ್ಯಗಳಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಲಾಗಿತ್ತು. ಈ ಕುರಿತಾಗಿ ವಿಚಾರ ವಿಮರ್ಶೆ ನಡೆಸಿದ ಬಳಿಕ ಅವರು ವಯನಾಡಿನಿಂದಲೂ ಸ್ಪರ್ಧಿಸುವುದು ಖಚಿತವಾಗಿದೆ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ 'ಅಮೇಠಿಯೊಂದಿಗೆ ರಾಹುಲ್ ಗಾಂಧಿಗಿರುವ ಸಂಬಂಧಕ್ಕೆ ಸರಿ ಸಾಟಿಯಿಲ್ಲ' ಎಂದಿದ್ದಾರೆ.

ಕಳೆದ ಬಹಳಷ್ಟು ದಿನಗಳಿಂದ ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸುತ್ತಾರೆಂಬ ವಿಚಾರ ಸದ್ದು ಮಾಡಿತ್ತು. ಆರಂಭದಲ್ಲಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಮಾತು ಕೇಳಿ ಬಂದಿತ್ತಾದರೂ ಬಳಿಕ ಹಲವಾರು ಗೊಂದಲಗಳು ಏರ್ಪಟ್ಟಿದ್ದವು. ರಾಹುಲ್ ಗಾಂಧಿಯನ್ನು ಈ ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಡ ಹೇರುವುದಕ್ಕೆ ಪಕ್ಷದ ಆಂತರಿಕ ಕಲಹಗಳೇ ಕಾರಣ ಎನ್ನಲಾಗಿದೆ. 

ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರಾದ ರಮೇಶ್ ಚೆನ್ನೀತಲಾ ಹಾಗೂ ಮಾಜಿ ಸಿಎಂ ಓಮನ್ ಛಾಂಡಿ ಇಬ್ಬರ ನಡುವೆ ಭಾರೀ ಪೈಪೋಟಿ ಆರಂಭವಾಗಿತ್ತು. ಹೀಗಿರುವಾಗ ಇವರಿಬ್ಬರಲ್ಲಿ ಕಣಕ್ಕಿಳಿಯುವವರು ಯಾರು ಎಂಬುವುದೇ ಅಂಗೊಳಿಸುವುದು ಸಮಸ್ಯೆಯಾಗಿತ್ತು. ಹೀಗಾಗಿ ಅಲ್ಲಿನ ಪ್ರಾದೇಶಿಕ ಕಾಂಗ್ರೆಸ್ ರಾಹುಲ್ ಗಾಂಧಿಗೆ ಸ್ಪರ್ಧಿಸಲು ಆಹ್ವಾನ ನೀಡಿತ್ತು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios