ರಿಜ್ವಾನ್ ಅರ್ಷದ್ ಆಸ್ತಿ 5 ಪಟ್ಟು ಹೆಚ್ಚಳ| 2014ರಲ್ಲಿ 3.14 ಕೋಟಿ ಆಸ್ತಿ, 2019ರಲ್ಲಿ .15.74 ಕೋಟಿ ಆಸ್ತಿಯ ಒಡೆಯ
ಬೆಂಗಳೂರು[ಮಾ.26]: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ತಾವು .15.74 ಕೋಟಿ ಒಡೆಯ ಎಂದು ಚುನಾವಣಾ ಆಯೋಗದ ಮುಂದೆ ಘೋಷಿಸಿಕೊಂಡಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ .3.14 ಕೋಟಿ ಆಸ್ತಿ ಹೊಂದಿರುವುದಾಗಿ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ದ ರಿಜ್ವಾನ್ ಅವರ ಆಸ್ತಿ ಕಳೆದ ಐದು ವರ್ಷದಲ್ಲಿ ಐದು ಪಟ್ಟು ವೃದ್ಧಿಯಾಗಿದೆ. 2014ರಲ್ಲಿ ತಮ್ಮ ಹಾಗೂ ಪತ್ನಿ ನಜೀಹಾ ಭಾನು ಬಳಿ .2.40 ಕೋಟಿ ಸ್ಥಿರಾಸ್ತಿ ಹಾಗೂ .74 ಲಕ್ಷ ಚರಾಸ್ತಿ ಹೊಂದಿದ್ದು, ಒಟ್ಟು .3.14 ಕೋಟಿ ಆಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದರು.
ಸೋಮವಾರ ಸಲ್ಲಿಕೆ ಮಾಡಿರುವ ಪ್ರಮಾಣಪತ್ರದಲ್ಲಿ .1.54 ಕೋಟಿ ಚರಾಸ್ತಿ, .14.20 ಕೋಟಿ ಸ್ಥಿರಾಸ್ತಿ ಸೇರಿ ಬರೋಬ್ಬರಿ .15.74 ಕೋಟಿ ಮೊತ್ತದ ಆಸ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಬಳಿ .2.42 ಲಕ್ಷ ನಗದು, .6.75 ಲಕ್ಷ ಮೊತ್ತದ 225 ಗ್ರಾಂ ಚಿನ್ನ, .8.96 ಲಕ್ಷ ಬೆಲೆಯ ಮಾರುತಿ ಸುಜುಕಿ ಬ್ರೆಜ್ಜಾ ಕಾರು ಹಾಗೂ .7.71 ಲಕ್ಷ ಮೌಲ್ಯದ ಬಲೆನೊ ಕಾರು ಹೊಂದಿದ್ದೇನೆ. ಜತೆಗೆ 6 ಬ್ಯಾಂಕ್ ಖಾತೆಗಳಲ್ಲಿನ ಹಣ ಸೇರಿದಂತೆ ಒಟ್ಟು .1.16 ಕೋಟಿ ಚರಾಸ್ತಿ ಹೊಂದಿದ್ದೇನೆ. ಪತ್ನಿ ಬಳಿ .2.53 ಲಕ್ಷ ನಗದು, .18.75 ಲಕ್ಷ ಮೌಲ್ಯದ 625 ಗ್ರಾಂ ಚಿನ್ನ ಸೇರಿ 38.03 ಲಕ್ಷ ಚರಾಸ್ತಿ ಹೊಂದಿದ್ದಾರೆ.
ರಿಜ್ವಾನ್ ಅರ್ಷದ್ ಹೆಸರಿನಲ್ಲಿ .13.91 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಮೈಸೂರಿನಲ್ಲಿ 3 ನಿವೇಶನ, ಬೆಂಗಳೂರಿನ ಬೆನ್ಸನ್ ಟೌನ್‌ನಲ್ಲಿ ಫ್ಲ್ಯಾಟ್, ಫ್ರೇಜನ್ ಟೌನ್‌ನಲ್ಲಿ 4260 ಚ.ಅ. ವಿಸ್ತೀರ್ಣದಲ್ಲಿ ನಿರ್ಮಾಣ ಹಂತದ ಮನೆ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ .30.40 ಲಕ್ಷ ಸ್ಥಿರಾಸ್ತಿ ಹೊಂದಿದ್ದಾರೆ. ಉಳಿದಂತೆ ವಸತಿ ಸಾಲ, ವೈಯಕ್ತಿಕ ಸಾಲ ಸೇರಿದಂತೆ ರಿಜ್ವಾನ್ ಅರ್ಷದ್ .4.45 ಕೋಟಿ ಹಾಗೂ ಪತ್ನಿ .5 ಲಕ್ಷ ಸಾಲ ಹೊಂದಿದ್ದಾರೆ.
* ವಿದ್ಯಾರ್ಹತೆ: ಬಿಕಾಂ
* ಒಟ್ಟು ಆಸ್ತಿ- .15.74 ಕೋಟಿ
ಗೆಲ್ಲುವ ವಿಶ್ವಾಸವಿದೆ
ಸೋಮವಾರ ನಗರ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿದ ರಿಜ್ವಾನ್ ಅರ್ಷದ್, ಬೆಂಗಳೂರು ಕೇಂದ್ರ ಸಂಸದರು ಕಳೆದ ಐದು ವರ್ಷದಿಂದ ಮಾಯವಾಗಿದ್ದಾರೆ. ಸಂಸತ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಏನೂ ಮಾಡಿಲ್ಲ. ಹೀಗಾಗಿ ಬದಲಾವಣೆ ಬಯಸಿ ಸಂಸತ್‌ನಲ್ಲಿ ಧ್ವನಿ ಎತ್ತುವ ಪ್ರತಿನಿಧಿಯಾಗಿ ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಪ್ರಕಾಶ್ ರೈ ಅವರ ಸ್ಪರ್ಧೆಯಿಂದ ನಮಗೆ ಸಮಸ್ಯೆಯಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ನೇರ ಪೈಪೋಟಿ ಇರಲಿದೆ. ಜೆಡಿಎಸ್‌ನವರೂ ಬೆಂಬಲಿಸಿರುವುದರಿಂದ ಬೆಂಬಲಿಸಿರುವುದರಿಂದ ಗೆಲ್ಲಲಿದ್ದೇನೆ ಎಂದರು. ಈ ವೇಳೆ ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್‌ಖಾನ್, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
