'56 ಇಂಚಿನ ಎದೆ ಇದ್ದರೆ ಸಾಲದು, ಸಾಲಮನ್ನಾ ಮಾಡುವ ಹೃದಯ ಬೇಕು’
ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಬಿಜೆಪಿ, ನರೇಂದ್ರ ಮೋದಿ ಮತ್ತು ಗದ್ದಿಗೌಡರ್ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಬಾಗಲಕೋಟೆ [ಏ. 01] ನಾನು ಮೋದಿ ವಿರೋಧಿ ಅಲ್ಲ. ವೈಯಕ್ತಿಕವಾಗಿ ನನ್ನ ಅವರ ವಿರೋಧ ಏನು ಇಲ್ಲ . ಐದು ವರ್ಷದಲ್ಲಿ ಮೋದಿ ಏನು ಮಾಡಿದ್ದೇನೆ ಅನ್ನೋದು ದೇಶದ ಜನರ ಮುಂದೆ ಇಡಬೇಕು. ನುಡಿದಂತೆ ಮೋದಿ ನಡೆಯಲಿಲ್ಲ. ಭರವಸೆ ಏನು ಕೊಟ್ಟಿದ್ರು. ಅದರಲ್ಲಿ ಎಷ್ಟು ಈಡೇರಿಸಿದ್ದೇವೆ ಅನ್ನೋದು ಜನರ ಮುಂದೆ ಇಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
ದೇಶದ ಉದ್ದಗಲಕ್ಕೂ ಮೋದಿ ಭಾಷಣ ಮಾಡ್ತಿದ್ದಾರೆ. ಏನು ಅಭಿವೃದ್ಧಿ ಮಾಡಿದ್ದೇನೆ ಅನ್ನೋದನ್ನು ಮೋದಿ ಹೇಳ್ತಿಲ್ಲ. 2018ರ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿರಬಹುದು. ಆದ್ರೆ ನಾವು ಕೊಟ್ಟ ಭರವಸೆ ಈಡೇರಿಸಿರೋ ಬಗ್ಗೆ ಹೇಳಿದ್ವಿ. ಪುಲ್ವಾಮಾ, ಸರ್ಜಿಕಲ್ ಸ್ಟ್ರೈಕ್, ಭಾವಾನಾತ್ಮಕ, ದೇಶಭಕ್ತಿ ಬಗ್ಗೆ ಹೇಳ್ತಿದ್ದಾರೆ. ನರೇಂದ್ರ ಮೋದಿ ಬಲಿಷ್ಠ ಪ್ರಧಾನಿ ಅಂತಿದ್ದಾರೆ. ಆದ್ರೆ ದೇಶ ಎಷ್ಟು ಬಲಿಷ್ಠವಾಯ್ತು? ಜನರ ಸಮಸ್ಯೆ ಬಗೆಹರಿತಾ? ಎಂದು ಪ್ರಶ್ನಿಸಿದ್ದಾರೆ.
ಚುನಾವಣೆ ಹತ್ತಿರದಲ್ಲಿರುವಾಗ ಶಿವಮೊಗ್ಗ ಜೆಡಿಎಸ್‌ಗೆ ದೊಡ್ಡ ಆಘಾತ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 12 ಸರ್ಜಿಕಲ್ ಸ್ಟ್ರೈಕ್ ಆಯ್ತು. ನರೇಂದ್ರ ಮೋದಿ ಒಂದೇ ಸರ್ಜಿಕಲ್ ಸ್ಟ್ರೈಕ್ ಮಾಡಿ ದೇಶಭಕ್ತಿ ಹೇಳುತ್ತಿದ್ದೀರಿ. ನರೇಂದ್ರ ಮೋದಿಯವರೇ 56 ಇಂಚಿನ ಎದೆ ಇದ್ರೆ ಸಾಲದು.. ಅಭಿವೃದ್ಧಿ ಮಾಡುವ ಹೃದಯವಿರಬೇಕು. ಬರಗಾಲವಿದೆ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಎಂದರು.
ರೈತ ವಿರೋಧಿ ಕೇಂದ್ರ ಸರ್ಕಾರ. ಶ್ರೀಮಂತರ ಸಾಲಮನ್ನಾ ಮಾಡಿದ್ರು ನಾನು ಪ್ರತಿ ರೈತರಿಗೆ 50 ಸಾವಿರವರೆಗೆ ಸಾಲಮನ್ನಾ ಮಾಡಿದೆ. ಆದರೆ ನೀವು ಸಾಲ ಮನ್ನಾದ ಬಗ್ಗೆ ಮಾತೇ ಆಡಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಲಮನ್ನಾ ಮಾಡ್ರೀ ಎಂದ್ರೇ. ನೋಟು ಪ್ರಿಂಟ್ ಮಾಡೋ ಮಶೀನ್ ಇಲ್ಲವೆಂದು ಮಿಸ್ಟರ್ ಯಡಿಯೂರಪ್ಪ ಹೇಳಿದ್ರು ಎಂದು ಟೀಕಿಸಿದರು.
ನರೇಂದ್ರ ಮೋದಿ ಎಷ್ಟು ಉದ್ಯೋಗ ಕೊಟ್ರಿ. ಅದನ್ನು ಹೇಳಿ ಮೋದಿಯವರೇ, ಪುಲ್ವಾಮಾ ದಾಳಿ ಬಗ್ಗೆ ಅಲ್ಲ. ನರೇಂದ್ರ ಮೋದಿ ನಿಮಗೆ ನಾಚಿಕೆ ಆಗೋಲ್ವಾ. ಈ ಬಗ್ಗೆ ಮೋದಿಯವರಿಗೆ ಕೇಳ್ಬೇಕಲ್ಲಾ. ಪಿ.ಸಿ ಗದ್ದಿಗೌಡರ ಒಮ್ಮೆಯಾದ್ರೂ ಸಂಸತ್ ನಲ್ಲಿ ಮಾತನಾಡಿದ್ರಾ? ಹಾಗಾದ್ರೆ ಸಂಸದರಾಗಿ, ಟಿಎಡಿಎ ತೆಗೆದುಕೊಳ್ಳೋಕೆ ಹೋಗ್ತಿರಾ. ಅಧಿಕಾರಿಕ್ಕೆ ಬಂದ್ರೆ ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕ್ತಿನಿ ಅಂದಿರಿ, ಹಣ ಬಂತಾ ಎಂದು ಪ್ರಶ್ನೆ ಮಾಡಿದರು.
ನರೇಂದ್ರ ಮೋದಿ ಯವರೇ ನೀವು ಬಡವರ, ಕೂಲಿಕಾರ್ಮಿಕರಿಗೆ ಚೌಕಿದಾರ ಆಗ್ಬೇಕು. ಆದರೆ ನೀವು ಮಲ್ಯ, ನೀರವ್ ಮೋದಿ, ಶ್ರೀಮಂತರ ಚೌಕಿದಾರ. ನಾನು ಕರ್ನಾಟಕ ಹಸಿವು ಮುಕ್ತ ರಾಜ್ಯವಾಗ್ಬೇಕೆಂದು ಅನ್ನಭಾಗ್ಯ ಜಾರಿ ಮಾಡಿದೆ. ನರೇಂದ್ರ ಮೋದಿ ನೀವೇನು ಮಾಡಿದ್ದೀರಿ? ಇದೆಲ್ಲಾ ಚರ್ಚೆ ಆಗಬೇಕು. ದೇಶ ಉಳಿಯಬೇಕು. ಅಧಿಕಾರ ಇವತ್ತು ಬರುತ್ತೇ ನಾಳೆ ಹೋಗುತ್ತೆ. ಆದರೆ ಕೆಲಸ ಶಾಶ್ವತವಾಗಿ ಇರುತ್ತದೆ ಎಂದರು.