ಚಾಮರಾಜನಗರ[ಮಾ. 15] ಕಾಂಗ್ರೆಸ್ ಅವಧಿಯಲ್ಲಿ ಪಾಕಿಸ್ತಾನದ ವಿರುದ್ದ  12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿತ್ತು.  ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದ್ದೇವು. ಆದರೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.  ಆದರೆ ಈಗ ಪದೇ ಪದೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳುವ ಮೂಲಕ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೆ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಯಾಗಲಿಲ್ಲ. ಲಕ್ಷಾಂತರ ಕೋಟಿ ರೂ.  ಉಳಿತಾಯವಾಗಿದೆ. ಎಲ್ಲಿ ಹೋಯ್ತು ಈ ಹಣ ರಾಷ್ಟ್ರದ ಜನತೆಗೆ ಲೆಕ್ಕ ಕೊಡಿ ಮೋದಿಯವರೆ ಎಂದು ಪ್ರಶ್ನೆ  ಮಾಡಿದರು.

ನಾವು ದಾಳಿ ನಡೆಸಿ ಸುಮ್ಮನೆ ಕುಳಿತಿದ್ದೆವು : ಪಾಕ್‌ ಬೆಳಗ್ಗೆ 5ಕ್ಕೇ ಅಳುತ್ತಿತ್ತು

ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಣ ಹಾಕ್ತೀವಿ ಅಂದಿದ್ರಿ.  ಆದರೆ 15 ಲಕ್ಷ ಇರಲಿ 15 ಪೈಸೆನೂ ಹಾಕಿಲ್ಲ ಎಂದು ಕೇಂದ್ರ ಸರಕಾರ ಮತ್ತು ಬಿಜೆಪಿ ಮೇಲೆ ವಾಘ್ದಾಳಿ ಮಾಡಿದರು.