ರೇವಣ್ಣರಿಂದ ನಿಂಬೆ ಸ್ವೀಕರಿಸಲು ಕಾಂಗ್ರೆಸ್ ನಾಯಕಿ ಹಿಂದೇಟು
ರೇವಣ್ಣರಿಂದ ನಿಂಬೆ ಸ್ವೀಕರಿಸಲು ಕಾಂಗ್ರೆಸ್ ನಾಯಕಿ ಹಿಂದೇಟು| ಮುಜುಗರದಲ್ಲೇ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಗಾಯತ್ರಿ
ಅರಕಲಗೂಡು[ಏ.13]: ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ನಿಂಬೆಹಣ್ಣು ಸ್ವೀಕರಿಸಲು ಕಾಂಗ್ರೆಸ್ ನಾಯಕಿ ಹಿಂದೇಟು ಹಾಕಿದ ಪ್ರಸಂಗ ನಡೆಯಿತು.
ಅರಕಲಗೂಡಿನಲ್ಲಿ ಗುರುವಾರ ರಾತ್ರಿ ನಡೆದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಎಚ್.ಡಿ.ರೇವಣ್ಣ ಅವರು ಜಿಲ್ಲಾ ಕಾಂಗ್ರೆಸ್‌ನ ಉಸ್ತುವಾರಿ ಗಾಯತ್ರಿ ಶಾಂತೇಗೌಡಗೆ ನಿಂಬೆಹಣ್ಣು ಕೊಡಲು ಮುಂದಾದರು. ಆದರೆ ನಿಂಬೆಹಣ್ಣನ್ನು ಸ್ವೀಕರಿಸಲು ಕಾಂಗ್ರೆಸ್ ನಾಯಕಿ ಗಾಯತ್ರಿ ಹಿಂದೇಟು ಹಾಕಿದರು.
ಆದರೆ ರೇವಣ್ಣ ಅವರು ಪದೇ ಪದೆ ಒತ್ತಾಯ ಪೂರ್ವಕವಾಗಿ ನಿಂಬೆಹಣ್ಣನ್ನು ಕೊಟ್ಟರು. ಕೊನೆಗೆ ರೇವಣ್ಣಅವರಿಂದ ನಿಂಬೆಹಣ್ಣನ್ನು ಸ್ವೀಕರಿಸಿದ ಗಾಯಿತ್ರಿ, ತಕ್ಷಣವೇ ಆತಂಕದಿಂದಲೇ ನಿಂಬೆಹಣ್ಣನ್ನು ಕೆಳಗಿಟ್ಟರು.