Asianet Suvarna News Asianet Suvarna News

ಕೈಗೆ ಜೈ ಎಂದ ಬಿಜೆಪಿ ನಾಯಕಗೆ ಒಂದೇ ಗಂಟೆಯಲ್ಲಿ ಲೋಕಸಭಾ ಟಿಕೆಟ್

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಅತ್ಯಂತ ಹಿರಿಯ ನಾಯಕರೋರ್ವರು ಕೈಗೆ ಜೈ ಎಂದಿದ್ದಾರೆ. 

Congress fields Shatrughan Sinha from Patna Sahib Lok Sabha constituency
Author
Bengaluru, First Published Apr 7, 2019, 7:41 AM IST
  • Facebook
  • Twitter
  • Whatsapp

ನವದೆಹಲಿ : ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಬಿಜೆಪಿಯ ಟೀಕಾಕಾರರಾಗಿದ್ದ ಶತ್ರುಘ್ನ ಸಿನ್ಹಾ  ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಏಪ್ರಿಲ್ 6 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಸೇರಿದ್ದು, ಇದೀಗ ಅವರ ಸ್ವ ಕ್ಷೇತ್ರದಿಂದ ಕಾಂಗ್ರೆಸ್ ಸಿನ್ಹಾಗೆ ಟಿಕೆಟ್ ನೀಡಿದೆ. 

ಶತ್ರುಘ್ನ ಸಿನ್ಹಾ ಅವರ ಕ್ಷೇತ್ರವಾದ ಪಾಟ್ನಾ ಸಾಹಿಬ್ ನಿಂದ ಈ ಬಾರಿ ಬಿಜೆಪಿ ರವಿ ಶಂಕರ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸಿನ್ಹಾ ಅಂದೇ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದರು. 

ಇದೀಗ ಕಾಂಗ್ರೆಸ್ ಸೇರಿದ ಒಂದೇ ಗಂಟೆಯಲ್ಲಿ  ಶತ್ರುಘ್ನ ಸಿನ್ಹಾಗೆ ಕಾಂಗ್ರೆಸ್ ಪಾಟ್ನಾ ಸಾಹಿಬ್ ನಿಂದ ಟಿಕೆಟ್ ನೀಡಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios